ಯೇನೆಕಲ್ಲು ಶಾರದಾಗುಡ್ಡ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ ಸೆ. 8ರಂದು ಬಾಲವಿಕಾಸ ಸಮಿತಿಯ ನೀತಾ ಪುನೀತ್ ಕರ್ನಾಜೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮೋಹನ್ ಕೋಟಿಗೌಡನಮನೆ, ಆಶಾ ಕಾರ್ಯಕರ್ತೆ ಸಾವಿತ್ರಿ ಅಂಬೆಕಲ್ಲು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಇಂದಿರಾ ರಾಮಯ್ಯ ಮಾದನ ಮನೆ, ಹಿರಿಯರಾದ ಶ್ರೀಮತಿ ಕುಸುಮಾವತಿ ಅಂಬೆಕಲ್ಲು ಸೇರಿದಂತೆ ಪೋಷಕರು ಉಪಸ್ಥಿತರಿದ್ದರು. ಮಾತೆಯರು ತಯಾರಿಸಿದ 25 ಕ್ಕೂ ಅಧಿಕ ಖಾದ್ಯಗಳು ಪ್ರದರ್ಶನಗೊಂಡವು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಧರ್ಮಾವತಿ ಸ್ವಾಗತಿಸಿ, ಇಲಾಖೆಯಿಂದ ದೊರೆಯುವ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳ ಬಗ್ಗೆ ಮಾಹಿತಿ ನೀಡಿದರು.










ಸಹಾಯಕಿ ಶ್ರೀಮತಿ ಪ್ರತಿಭಾ ಮತ್ತು ಪುಟಾಣಿ ಮಕ್ಕಳು ಉಪಸ್ಥಿತರಿದ್ದರು. ಅಶೋಕ್ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.










