ಈದ್ ಮಿಲಾದ್ ಪ್ರಯುಕ್ತ ಕೇರಳದ ಕಲ್ಲಿಕೋಟೆಯ ಮರ್ಕಜ್ ಕಾರಂದೂರಿನಲ್ಲಿ ಕಲಿಯುತ್ತಿರುವ ಕರ್ನಾಟಕ ವಿದ್ಯಾರ್ಥಿಗಳ ಒಕ್ಕೂಟವಾದ ಕೆ ಎಸ್ ಒ ಸಂಘಟನೆಯ ವತಿಯಿಂದ ಸುಳ್ಯದಲ್ಲಿ ಸಾರ್ವಜನಿಕರಿಗೆ ಸಿಹಿ ತಿಂಡಿ ವಿತರಣಾ ಕಾರ್ಯಕ್ರಮ ಸೆ 12 ರಂದು ನಡೆಯಿತು.









ಇದು ಮಿಲಾದ್ ಕ್ಯಾಂಪೇನ್ “ಶಫೀಯುಲ್ ಉಮಮ್ ೩.೦” ಭಾಗವಾಗಿ ಆಯೋಜಿಸಲಾಗಿದ್ದ ಅತ್ತವದ್ದುದ್ – ಪ್ರೀತಿ ಹಂಚೋಣ ಕಾರ್ಯಕ್ರಮವಾಗಿದೆ ಎಂದು ಸಂಘಟಕರು ತಿಳಿಸಿದರು.
“ಪ್ರೀತಿ ಹಂಚೋಣ” ಎಂಬ ಸಂದೇಶದೊಂದಿಗೆ ವಿವಿಧ ಸಮುದಾಯದ ಜನರಿಗೆ ಸಿಹಿ ತಿಂಡಿ ವಿತರಿಸಿ ಈದ್ ಮಿಲಾದ್ ಹಬ್ಬದ ಸಂತೋಷವನ್ನು ಹಂಚಿಕೊಳ್ಳಲಾಯಿತು.
ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿ ಎಲ್ಲರಿಗೂ ಪ್ರೀತಿ ಹಾಗೂ ಸಹೋದರತ್ವದ ಸಂದೇಶವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕೆ ಎಸ್ ಒ ಉಪಾಧ್ಯಕ್ಷರಾದ ಹಾಫಿಲ್ ಸಿದ್ದೀಕ್, ಸದಸ್ಯರಾದ ಮುಂಜಿರ್ , ಕರೀಂ, ರಾಶಿದ್ , ಸಈದ್ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಬೆಂಬಲ ನೀಡಿದರು.










