ಮುಂದಿನ ದಿನಗಳಲ್ಲಿ ಸಾರ್ವಜನಿಕರು ಆರೋಗ್ಯ ತಪಾಸಣಾ ಕೇಂದ್ರದ ಪ್ರಯೋಜನವನ್ನು ಪಡೆದುಕೊಳ್ಳುವುದು ಅನಿವಾರ್ಯ : ಡಾ.ಕೆ.ವಿ ಚಿದಾನಂದ
ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ 106 ನೇ
ವಾರ್ಷಿಕ ಸಭೆಯ ಪ್ರಯುಕ್ತ, ಇನ್ನರ್ ವೀಲ್ ಕ್ಲಬ್ ಸುಳ್ಯ , ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ , ಕೆವಿಜಿ ಆಯುರ್ವೇದ ವೈದ್ಯಕೀಯ ಮತ್ತು ಆಸ್ಪತ್ರೆ ಸುಳ್ಯ ಸಹಯೋಗದೊಂದಿಗೆ
ಬೃಹತ್ ಉಚಿತ ಆರೋಗ್ಯ ತಪಾಸಣಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮವು ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಸೆ.14 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಎ. ಒ.ಎಲ್. ಇ (ರಿ) ಸುಳ್ಯ ಅಧ್ಯಕ್ಷ ಡಾ.ಕೆ.ವಿ ಚಿದಾನಂದ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ” ಇಂದು ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನಿಂದ ನಡೆಯುವ ಆರೋಗ್ಯ ತಪಾಸಣೆ ಸಾವರ್ಜನಿಕರಿಗೆಉಪಯೋಗವಾಗಿದೆ. ಇಂತಹ ಉಚಿತ ಆರೋಗ್ಯ ಕ್ಯಾಂಪ್ ಮಾಡುವುದರಿಂದ ಇತರೆ ಸಂಘ ಸಂಸ್ಥೆಗಳಿಗೆ ಪ್ರೇರಣೆಯಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆರೋಗ್ಯ ತಪಾಸಣಾ ಕೇಂದ್ರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿದೆ ಹಾಗೂ ಎಲ್ಲರೂ ಕೂಡಾ ಇಂದು ನಡೆಯುವ ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡು ಆರೋಗ್ಯದ ಕಡೆ ಗಮನ ಹರಿಸಿ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಶುಭ ಹಾರೈಸಿದರು.
















ಈ ಸಂದರ್ಭದಲ್ಲಿ ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಸಂತೋಷ್ ಕುತ್ತ ಮೊಟ್ಟೆ, ನಿವೃತ್ತ ಪ್ರಾಂಶುಪಾಲರು, ಅರoತೋಡು ನೆಹರೂ ಸ್ಮಾರಕ ಪ .ಪೂ ಕಾಲೇಜಿನ ಸಂಚಾಲಕರ ಕೆ.ಆರ್ ಗಂಗಾಧರ , ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ , ಇನ್ನರ್ ವೀಲ್ ಕ್ಲಬ್ ಸುಳ್ಯ ಅಧ್ಯಕ್ಷ ಡಾ. ಸವಿತಾ ಸಿ. ಕೆ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್ , ಉಪಾಧ್ಯಕ್ಷ ಡಾ .ಲಕ್ಷ್ಮೀಶ ಕೆ .ಎಸ್
, ಆಡಳಿತ ಮಂಡಳಿಯ ಸದಸ್ಯರಾದ ದಯಾನಂದ ಕುರುಂಜಿ , ಚಂದ್ರ ಶೇಖರ ತೊಡಿಕಾನ , ಶಿವಾನಂದ ಕುಕ್ಕುಂಬಳ , ಉದಯ ಕುಮಾರ್ ಉಳುವಾರು, ಚಂದ್ರ ಶೇಖರ ಎ.ಎಸ್, ಶ್ರೀಲತಾ ದೇರಾಜೆ , ಲೋಚನಾ ಕೊಳಲು ಮೂಲೆ, ಪದ್ಮಯ್ಯ ಅಡ್ಯಡ್ಕ , ದಿನೇಶ್ ಅರಮನೆ ಗಾಯ , ಪ್ರಶಾಂತ್ ಕಾಪಿಲ , ಕುಸುಮಾಧರ ಅಡ್ಕ ಬಳೆ, ಅಣ್ಣಯ್ಯ ಗೌಡ ಉಳುವಾರು, ರತನ್ ಕೆ. ಎಸ್ , ಸಿಬ್ಬಂದಿ ವರ್ಗ , ನವೋದಯ ಸ್ವಸಹಾಯ ಸಂಘ ಗ್ರಾಮಸ್ಥರು ಉಪಸ್ಥಿತರಿದ್ದರು. ಬಳಿಕ ಸಾವರ್ಜನಿಕರು ಉಚಿತ ಆರೋಗ್ಯ ತಪಾಸಣಾ ಕೇಂದ್ರದಲ್ಲಿ ಪಾಲ್ಗೊಂಡು ಪ್ರಯೋಜನವನ್ನು ಪಡೆದುಕೊಂಡರು.
ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಸರ್ವರನ್ನು ಸ್ವಾಗತಿಸಿದರು.










