ಉಡುಪಿಯಲ್ಲಿ ಸೆ. 6 ರಂದು ನಡೆದ ಪ್ರವೀಣ್ ಕುಮಾರ್ ಮೆಮೋರಿಯಲ್ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್- 2025 ರಲ್ಲಿ ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ 8 ನೇ ತರಗತಿ ವಿದ್ಯಾರ್ಥಿನಿ ಯಶ್ಮಿತಾ ಎಂ. ಆಚಾರ್ಯ ದೊಡ್ಡಡ್ಕ ಕುಮಿಟೆ ಪ್ರಥಮ ಹಾಗೂ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಲಭಿಸಿದೆ.








ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಅಂಡ್ ಆರ್ಟ್ಸ್ ಮಲ್ಪೆ ಡೊಜೊ ವತಿಯಿಂದ ಉಡುಪಿಯ ಅಮೃತ ಗಾರ್ಡನ್ ನಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಕುಮಿಟೆ ಸ್ಪರ್ಧೆಯಲ್ಲಿ ಪ್ರಥಮ
ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಈಕೆ ದೊಡ್ಡಡ್ಕ ಮಲ್ಲೇಶ್ ಎಂ.ಆರ್. , ಭಾರತಿ ಎ.ವಿ. ದಂಪತಿಗಳ ಪುತ್ರಿಯಾಗಿದ್ದಾರೆ. ಈಕೆಗೆ ಕರಾಟೆ ಶಿಕ್ಷಕ ಚಂದ್ರಶೇಖರ್ ಕನಕಮಜಲು ತರಬೇತಿ ನೀಡಿರುತ್ತಾರೆ.










