
ಎಡಮಂಗಲದ ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಪೂರ್ವ ಸಂಪ್ರದಾಯದಂತೆ ನವರಾತ್ರಿ ಉತ್ಸವ ನಡೆಯಲಿರುವುದು. ಆ ಪ್ರಯುಕ್ತ ಸೆಪ್ಟೆಂಬರ್ ೧೪ ರಂದು ಆಮಂತ್ರಣ ಪತ್ರಿಕೆಯು ದೇವಳದ ಪ್ರಧಾನ ಅರ್ಚಕ ಶ್ರೀಹರಿ ಕುಂಜೂರಾಯರ ವೈಧಿಕ ಕಾರ್ಯಕ್ರಮಗಳೊಂದಿಗೆ ಬಿಡುಗಡೆಗೊಂಡಿತು.









ಬಳಿಕ ಎಣ್ಮೂರು, ಮುರುಳ್ಯ, ಎಡಮಂಗಲ, ಮತ್ತು ಕೂಡುಕಟ್ಟಿನ ಸದಸ್ಯರಿಂದ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಎನ್. ಜಿ. ಲೋಕನಾಥ ರೈ ಪಟ್ಟೆ, ಸದಸ್ಯರಾದ ಲೋಕೇಶ್ ಕೇರ್ಪಡ, ವಾಚಣ್ಣ ಗೌಡ ಹುದೇರಿ, ಗೌರಮ್ಮ ಯಾನೆ ಗುಣವತಿ ನಾವೂರು, ವೇಣುಗೋಪಾಲ ರೈ ಕಲ್ಲೇರಿ, ಪ್ರಮೋದ್ ಕುಮಾರ್ ರೈ ಕಟ್ಟ ಹೊಸಜಾಲು, ಬಿಜಿಲ ಅಲೆಕ್ಕಾಡಿ, ಕಸ್ತೂರಿ ಚಂದ್ರಶೇಖರ ಮೊಂಟಾಪಾದೆ, ಸಹಾಯಕ ರಾಮಚಂದ್ರ ಪೂಜಾರಿ ನೂಜಾಡಿ, ನಾಗರಾಜ ರಾವ್ ಆಲಾಜೆ, ರಮೇಶ್ ಕೋಟೆ, ಪಂಜ ದೇವಸ್ಥಾನದ ಸಮಿತಿ ಸದಸ್ಯ ಮಾಯಿಲಪ್ಪ ಗೌಡ ಎಣ್ಮೂರು, ಪೂದೆ ದೇವಸ್ಥಾನದ ಸಮಿತಿ ಸದಸ್ಯರಾದ ಕೃಷ್ಣಪ್ಪ ಗೌಡ ಪೂದೆ, ಹರೀಶ್ ಕುಮಾರ್ ಹುದೇರಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯ ಕರ ಸೇವಕರು, ಶ್ರೀ ಮಹಿಷಮರ್ದಿನೀ ಸೇವಾ ಸಮಿತಿ ಕೂಡುಕಟ್ಟು ಸದಸ್ಯರು, ನಿಂತಿಕಲ್ಲು ವಲಯ ಧರ್ಮಸ್ಥಳ ಒಕ್ಕೂಟ ಸದಸ್ಯರು ಮತ್ತು ಸೇವಾ ಪ್ರತಿನಿಧಿ ಲೀಲಾವತಿ ಶಿವಕುಮಾರ್, ಭಜನಾ ಮಂಡಳಿ ಸದಸ್ಯರು, ಧಾರ್ಮಿಕ ಮತ್ತು ಸಮಿತಿ ಸದಸ್ಯರು, ಪ್ರಾಂಜಲಿ ಕಲಾನಿಕೇತನ ಭರತ ನಾಟ್ಯ ಮುಖ್ಯಸ್ಥೆ ಪೃಥ್ವಿ ಪಿ. ಶೆಟ್ಟಿ ಮತ್ತು ಸದಸ್ಯರು, ಸೇರಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು.
ವರದಿ : ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ











