ಜಾಲ್ಸೂರು : ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನಾ ಮಂದಿರದ ಜೀರ್ಣೋದ್ದಾರ ಕಾರ್ಯಗಳ ಬಗ್ಗೆ ವಿಶೇಷ ಸಭೆ

0

ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನಾ ಮಂದಿರದ ಜೀರ್ಣೋದ್ದಾರ ಕಾರ್ಯಗಳ ಬಗ್ಗೆ ವಿಶೇಷ ಸಭೆ ಸೆ.14ರಂದು ಮಂದಿರದ ವಠಾರದಲ್ಲಿ ನಡೆಯಿತು.

ಶ್ರೀ ಗುರುರಾಘವೇಂದ್ರ ಭಜನಾ ಮಂದಿರದ ಅಧ್ಯಕ್ಷ ಜಯರಾಮ ರೈ ಜಾಲ್ಸೂರುರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಭಜನಾ ಮಂದಿರದ ಪಾಕಶಾಲೆ, ಭೋಜನ ಶಾಲೆ ಹಾಗೂ ಸಭಾಭವನ ಜೀರ್ಣೋದ್ಧಾರ ಕಾರ್ಯ ನಡೆಯಲಿದ್ದು ಸರ್ವರು ಸಹಕರಿಸಬೇಕೆಂದು ವಿನಂತಿಸಿಕೊಂಡರು. ಜ್ಯೋತಿಷ್ಯರ ಸಲಹೆಯಂತೆ ಭೂಮಿ ಪೂಜೆ ಕಾರ್ಯಕ್ರಮಕ್ಕೆ ದಿನಾಂಕ ನಿಗದಿ ಮಾಡಿ ಭೂಮಿ ಪೂಜೆ ಕಾರ್ಯಕ್ರಮ ಮಾಡುವುದೆಂದು ತಿಳಿಸಿದರು. ಅಲ್ಲದೆ 2027 ನೇ ಇಸವಿಯಲ್ಲಿ ಏಕಾಹ ಭಜನೆಗೆ 50 ವರ್ಷ ತುಂಬಲಿದ್ದು, ಅದ್ದೂರಿ ಕಾರ್ಯಕ್ರಮ ಮಾಡುವ ಬಗ್ಗೆ ವಿವರಿಸಿದರು.

ಸಭೆಯಲ್ಲಿದ್ದ ಭಕ್ತಾದಿಗಳು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಇದೇ ಸಂದರ್ಭ ಜೀರ್ಣೋದ್ಧಾರ ಕಾರ್ಯಕ್ಕೆ ತಮ್ಮ ಕೈಲಾದ ಮೊತ್ತವನ್ನು ನೀಡುವುದೆಂದು ಹಲವಾರು ಮಂದಿ ವಾಗ್ದಾನ ಮಾಡಿದರು.

ವೇದಿಕೆಯಲ್ಲಿ ಭಜನಾ ಮಂದಿರದ ಗೌರವಾಧ್ಯಕ್ಷ ಮೋಹನ್ ನಂಗಾರು, ಖಜಾಂಜಿ ವಿಷ್ಣು ಭಟ್ ಪೆರುಂಬಾರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ
ನಿಶಾಂತ್ ಮೊಂಟಡ್ಕ, ಭಜನಾ ಮಂದಿರದ ಅರ್ಚಕ ರಾಮಕೃಷ್ಣ ಭಟ್ ಪೆರುಂಬಾರು ಉಪಸ್ಥಿತರಿದ್ದರು.

ಭಜನಾ ಮಂದಿರದ ಕಾರ್ಯದರ್ಶಿ ಆತ್ಮಾನಂದ ಗಬ್ಬಲಡ್ಕ, ಮಾಧವ ಗೌಡ ಕಾಳಮನೆ, ದಾಮೋದರ ಮಹಾಬಲಡ್ಕ, ಗೋಪಾಲ ಶೇಟ್, ವಿಶ್ವನಾಥ್ ಕದಿಕಡ್ಕ, ಶ್ರೀಮತಿ ವೇದಾವತಿ ಅರಿಯಡ್ಕ, ಶ್ರೀಮತಿ ಜ್ಯೋತಿ ರೈ ಕುಂದ್ರುಕೋಡಿ, ಶ್ರೀಮತಿ ಸುಜಾತ ಭಟ್, ತಿಮ್ಮಯ್ಯ ಟೈಲರ್ ಜಾಲ್ಸೂರು, ಶ್ರೀಮತಿ ತಿರುಮಲೇಶ್ವರಿ ಮರಸಂಕ, ರಾಜು ಕೆ.ಪಿ. ಕುಂದ್ರುಕೋಡಿ, ರಾಜೇಶ್ ಪದವು (ಮಣಿ), ಬ್ಯಾಂಕ್ ಸುಂದರ ಜಾಲ್ಸೂರು, ಶ್ರೀಮತಿ ವಿಶಾಲಾಕ್ಷಿ ಕದಿಕಡ್ಕ, ಶ್ರೀಮತಿ ರುಕ್ಮಿಣಿ ಕದಿಕಡ್ಕ, ಸಂದೀಪ್ ಕದಿಕಡ್ಕ, ಚಂದ್ರಕಲಾ ಜಾಲ್ಸೂರು, ಧನುರಾಜ್ ಕದಿಕಡ್ಕ, ಸರಸ್ವತಿ ಜಾಲ್ಸೂರು, ಗಿರಿಜಾ ಕುಂದ್ರುಕೋಡಿ, ನಾಗಪ್ಪ ಗೌಡ ಕಾಳಮ್ಮನೆ, ಮೋಹಿನಿ ಜಾಲ್ಸೂರು, ಬಾಬು ಕೆ.ಎಂ., ಶಿವರಾಮ ರೈ ಕುರಿಯ, ಎನ್.ಎಂ. ಸತೀಶ ಕೆಮನಬಳ್ಳಿ, ನಂದಕಿಶೋರ ಬನಾರಿ, ಭಾಸ್ಕರ ಕೆ ಬದಿಯಡ್ಕ, ಸತೀಶ್ ಎಸ್ ಕಲಾಕೇಸರಿ ಜಾಲ್ಸೂರು, ಕೃಷ್ಣ ಜಾಲ್ಸೂರು, ದಿನೇಶ್ ಬದಿಯಡ್ಕ, ನಾರ್ಣಪ್ಪ ಟೈಲರ್, ಕೃಷ್ಣಪ್ಪ ಮರಸಂಕ, ಶ್ರೀವತ್ಸ ಜಾಲ್ಸೂರು, ಪ್ರಮೋದ್ ಬಾಣಬೆಟ್ಟು, ಮುರಳಿಧರನ್ ಕೆಮನಬಳ್ಳಿ, ಶ್ರೀಮತಿ ವಸಂತಿ ಕಾಳಮನೆ, ಮೋಹನ್ ಜಾಲ್ಸೂರು, ದಿವಾಕರ ರೈ, ಬಾಲಪ್ರದೀಪ್ ಕಾಟೂರು, ಜಗದೀಶ ಬೇರ್ಪಡ್ಕ, ಗೋಪಾಲ ಪದವು, ಶೇಷಪ್ಪ ಕಜೆಗದ್ದೆ, ಯಶ್ವಿತ್ ಕಾಳಮ್ಮನೆ
ಶ್ವೇತ (ಸೇವಾ ದೀಕ್ಷಿತೆ), ಪುಷ್ಪಾಕರ ಜಾಲ್ಸೂರು, ಶರತ್ ಚಂದ್ರ ಐ.ಕೆ ಕದಿಕಡ್ಕ, ಪರಮೇಶ್ವರ ಕುಂದ್ರುಕೋಡಿ, ರೋಹಿಣಿ ಕಾಳಮ್ಮನೆ, ಪುಷ್ಪಾವತಿ ಕಾಳಮ್ಮನೆ ಮೊದಲಾದವರು ಉಪಸ್ಥಿತರಿದ್ದರು.

ಕಮಲಾಕ್ಷ ನಂಗಾರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಜಯರಾಮ ಕದಿಕಡ್ಕ ವಂದಿಸಿದರು.