271 ಕೋಟಿ ರೂ.ವ್ಯವಹಾರ,47.72 ಲಕ್ಷ ಲಾಭ,ಸದಸ್ಯರಿಗೆ ಶೇ.7 ಡಿವಿಡೆಂಡ್

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲು ರವರ ಅಧ್ಯಕ್ಷತೆಯಲ್ಲಿ ಸೆ.14 ರಂದು ಸಂಘದ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲುರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಸ್ವಾಗತಿಸಿ ಸಂಘವು ವರದಿ ವರ್ಷದಲ್ಲಿ ಎಲ್ಲರ ಸಹಕಾರದಿಂದ 271 ಕೋಟಿ ರೂ.ವ್ಯವಹಾರ ಮಾಡಿ ರೂ.47,72,452.96 ನಿವ್ವಳ ಲಾಭ ಗಳಿಸಿದೆ.ಸಂಘದ ಸದಸ್ಯರಿಗೆ ಶೇ.7 ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು.
ಸಂಘದ ಸದಸ್ಯರ ಹಲವು ವರ್ಷಗಳ ಬೇಡಿಕೆಯಾಗಿದ್ದ ಮಣ್ಣು ಪರೀಕ್ಷಾ ಕೇಂದ್ರವನ್ನು ಸಂಘದಲ್ಲಿ ಕೂಡಲೇ ಪ್ರಾರಂಭಮಾಡಲಾಗುವುದು.
ಇದರಿಂದ ಕೃಷಿಕರಿಗೆ ತುಂಬಾ ಪ್ರಯೋಜನವಾಗಲಿದ್ದು ಕೃಷಿಗೆ ಗೊಬ್ಬರ ಬಳಕೆಗೆ ಅನುಕೂಲವಾಗಲಿದೆ.ರೈತರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಕೀಟನಾಶಕದ ಅಂಗಡಿ ಕೂಡ ಶೀಘ್ರದಲ್ಲಿ ಪ್ರಾರಂಭಮಾಡಲಿದ್ದೇವೆ ಎಂದು ಹೇಳಿದರು.








ಇಂದು ಸಹಕಾರ ಮಾರ್ಟನ್ನು ಕೂಡಾ ಉದ್ಘಾಟನೆ ಮಾಡಿದ್ದು ಸಂಸ್ಥೆಯಲ್ಲಿ ಆನ್ ಲೈನ್ ಖರೀದಿ ಮತ್ತು ಮಾರಾಟದ ಅವಕಾಶ ನೀಡಲಾಗಿದೆ ಎಲ್ಲರೂ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಂದಿನ ಯೋಜನೆಯ ಮಾಹಿತಿಯನ್ನು ನೀಡಿದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುನಂದ ಐ .ಆಳ್ವರವರು ಸಂಘದ ವರದಿ ಮಂಡಿಸಿದರು.

ಸಂಘದ ಸೇವಾ ಕಾರ್ಯಗಳು,ಬೆಳೆವಿಮೆ ಯೋಜನೆ,ಯಶಸ್ವಿನಿ ರೈತರ ಆರೋಗ್ಯ ರಕ್ಷಣಾ ಯೋಜನೆ ಮತ್ತು ಇನ್ನಿತರ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಸಾಧಕರಿಗೆ ಸನ್ಮಾನ
ನಾಟಿ ಹಸು ಸಂರಕ್ಷಣೆ ಬಗ್ಗೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪ್ರವೀಣ ಕೆ, ಕೋಳಿ ಸಾಕಾಣಿಕೆ ಶ್ರೀಮತಿ ಸಂಧ್ಯಾ ಯತೀಶ್ ಪೆಲತ್ತಡ್ಕ, ಉತ್ತಮ ಪೋಸ್ಟ್ ಮಾಸ್ಟರ್ ಪ್ರಶಸ್ತಿ ಪುರಸ್ಕೃತ ರಾಮಕೃಷ್ಣ ರಾವ್ ಪೆರುವಾಜೆ,ಅಂಚೆ ಇಲಾಖೆಯ ಅನಂತಕೃಷ್ಣ ಪ್ರಭು, ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ,ವಿಜಯ ಕುಮಾರ್ ರೈ,ಆರ್ಯಭಟ ಪ್ರಶಸ್ತಿ ಪುರಸ್ಕೃತ ಪ್ರಮೋದ್ ರೈ,ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ವಿ.ಫೋರ್ ಚಾನೆಲ್ ನ ಪುಷ್ಪರಾಜ ಶೆಟ್ಟಿ ಯವರನ್ನು ಶಾಲು ಹೊದಿಸಿ ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಎಸ್ ಎಸ್.ಎಲ್.ಸಿ,ಮತ್ತು ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಹಕಾರ ಮಾರ್ಟ್ ಉದ್ಘಾಟನೆ
ಸಹಕಾರ ಸಂಘದಲ್ಲಿ ಸಹಕಾರ ಮಾರ್ಟ್ ಉದ್ಘಾಟನೆಗೊಂಡಿತು.
ಹಿರಿಯರಾದ ಮಹಾಲಿಂಗ ಭಟ್ ಕುರುಂಬುಡೇಲು ಉದ್ಘಾಟಿಸಿ ಶುಭಹಾರೈಸಿದರು.
ಆನ್ ಲೈನ್ ಖರೀದಿಯ ಸುಲಭ ಮಾರ್ಗ ಇದಾಗಿದ್ದು ಸಂಸ್ಥೆಯಲ್ಲಿ ಆನ್ ಲೈನ್ ಖರೀದಿ ಮತ್ತು ಮಾರಾಟಕ್ಕೆ ಸದಸ್ಯರಿಗೆ ಹಾಗೂ ಇತರರಿಗೆ ಅವಕಾಶ ನೀಡಲಾಯಿತು.
ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಬಿ.ಕರುಣಾಕರ ಆಳ್ವ ಬೇರ್ಯ,ಐತ್ತಪ್ಪ ರೈ ಎ.ಅಜ್ರಂಗಳ,ಜನಾರ್ಧನ ಎ.ಆರ್ವಾರ,ಶ್ರೀಮತಿ ಭಾರತಿ ಕೆ.ಪಿ.ಕಲ್ಲೋಣಿ,ಶ್ರೀಮತಿ ವನಿತಾ ಸಾರಕರೆ,ಬಿಯಾಳು ಬೇರಿಯ,ವಾಸುದೇವ ನಾಯಕ್ ಐಗಳಮಕ್ಕಿ,ಭಾಸ್ಕರ ಗೌಡ ಎನ್.ನೆಟ್ಟಾರು,ನಾರಾಯಣ ಕೊಂಡೆಪ್ಪಾಡಿ,ಸುಂದರ ನಾಗನಮಜಲು ಉಪಸ್ಥಿತರಿದ್ದರು.

ಕು.ಚಂದನಾ ಪ್ರಾರ್ಥಿಸಿ,
ಪ್ರದೀಪ್ ಕುಮಾರ್ ರೈ ಪನ್ನೆ ಮತ್ತು ಸಿಬ್ಬಂದಿ ರವೀಂದ್ರನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಂಘದ ಉಪಾಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ವಂದಿಸಿದರು.
ಸಂಘದ ಸಿಬ್ಬಂದಿ ವರ್ಗದವರು ಸಹಕರಿಸಿದರು.










