ಯಾದವ ಸಭಾ ಸುಳ್ಯ ತಾಲೂಕು ಸಮಿತಿ, ಯಾದವ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಸುಳ್ಯ ಇದರ ವಾರ್ಷಿಕ ಮಹಾಸಭೆ – ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ

0

ಯಾದವ ಸಭಾ ಸುಳ್ಯ ತಾಲೂಕು ಸಮಿತಿ, ಯಾದವ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಸುಳ್ಯ ಇದರ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ ೧೪ರಂದು ಸುಳ್ಯದ ಶಿವಕೃಪಕಲಾ ಮಂದಿರದಲ್ಲಿ ನಡೆಯಿತು.

ಯಾದವ ಸಭಾ ತಾಲೂಕು ಸಮಿತಿ ಸುಳ್ಯ ಇದರ ಅಧ್ಯಕ್ಷ ಕರುಣಾಕರ ಹಾಸ್ಪಾರೆ ಅಧ್ಯಕ್ಷತೆ ವಹಿಸಿದ್ದರು.
ಯಾದವ ಸಭಾ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಎ.ಕೆ. ಮಣಿಯಾಣಿ ಬೆಳ್ಳಾರೆ, ಯಾದವ ಸಭಾ ಸಲಹಾ ಸಮಿತಿ ಅಧ್ಯಕ್ಷ ಸುಧಾಮ ಆಲೆಟ್ಟಿ, ಯಾದವ ಸಭಾ ಕೇಂದ್ರ ಸಮಿತಿ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಸದಾನಂದ ಕಾವೂರು, ಯಾದವ ಸಭಾ ಕೇಂದ್ರ ಸಮಿತಿ ಮಂಗಳೂರು ಇದರ ಕೋಶಾಧಿಕಾರಿ ಹಾಗೂ ವೀಕ್ಷಕರಾದ ಚಂದ್ರಶೇಖರ ಅಳಿಕೆ, ಯಾದವ ಸಭಾ ಕೇಂದ್ರ ಸಮಿತಿ ಮಂಗಳೂರು ಇದರ ಕಾರ್ಯದರ್ಶಿ ರಾಮಚಂದ್ರ ಕೇನಾಜೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತಾಲೂಕು ಸಮಿತಿಯನ್ನು ರಚಿಸಲಾಯಿತು.

ತಾಲೂಕು ಸಮಿತಿ ಅಧ್ಯಕ್ಷರಾಗಿ ಕರುಣಾಕರ ಹಾಸ್ಪಾರೆ, ಉಪಾಧ್ಯಕ್ಷರಾಗಿ ಬಾಲಕೃಷ್ಣ ಅಡ್ಡಬೈಲು, ಹಾಗೂ ಪ್ರಕಾಶ್ ಕಣಿಮರಡ್ಕ, ಕಾರ್ಯದರ್ಶಿಯಾಗಿ ಕೃಷ್ಣ ಬೆಟ್ಟ, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಕಾವ್ಯ ಅಶೋಕ್ ಯಾದವ್, ಕೋಶಾಧಿಕಾರಿಯಾಗಿ ಕರುಣಾಕರ ಕೇನಾಜೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿ.ವಿ. ಬಾಲನ್ ಸಂಪಾಜೆ, ಅಚ್ಚುತ ಸುಬ್ರಹ್ಮಣ್ಯ, ಶ್ರೀಮತಿ ಅನಿತ ಸುರೇಶ್ ಹಳೆಗೇಟು, ನಾರಾಯಣ ಬಾಲೆಂಬಿ, ಶ್ರೀಮತಿ ಸುಮಿತ್ರಾ ದೀನೇಶ್ ಬೆಟ್ಟ, ಅಚ್ಚುತ ಮಣಿಯಾಣಿ ಆಲೆಟ್ಟಿ, ಶ್ರೀಮತಿ ವಾರಿಜ ಬೊಳಿಯಕಂಡ, ಸುರೇಶ್ ಮುಂಡಕಜೆ, ಸುರೇಶ್ ಸಂಪತ್ತಿಲ, ಮನು ಅಡ್ಕಾರ್ ಹಾಗೂ ರಾಮಚಂದ್ರ ಕಣಿಮರಡ್ಕ ಆಯ್ಕೆಯಾದರು.

ತಾಲೂಕಿನಿಂದ ಕೇಂದ್ರ ಮಹಾಸಭೆ ಸದಸ್ಯರಾಗಿ ಎ. ಕೆ. ಮಣಿಯಾಣಿ ಬೆಳ್ಳಾರೆ, ಸುಧಾಮ ಆಲೆಟ್ಟಿ, ರಾಮಚಂದ್ರ ಕೇನಾಜೆ, ಕೆ.ಪಿ. ಮೋಹನ್ ಕಡಬ, ಕೃಷ್ಣ ಅಕ್ಕಪ್ಪಾಡಿ, ಕೊರಗಪ್ಪ ಮಾಸ್ತ್ರರ್ ಕಣಕ್ಕೂರು, ದಾಮೋದರ ಕೇನಾಜೆ, ರಾಜೀವಿ ಪರ್ಲಿಕಜೆ, ರಾಮಚಂದ್ರ ಕಣಿಮರಡ್ಕ, ವಿ.ವಿ. ಬಾಲನ್, ನಾರಾಯಣ ಮಣಿಯಾಣಿ ಬೀದಿಗುಡ್ಡೆ, ಚಂದ್ರಹಾಸ ಮಣಿಯಾಣಿ ಪಡ್ಪು, ಸುರೇಶ್ ಕಣಿಮರಡ್ಕ, ಉಮೇಶ್ ಇಂತಿಕಲ್ಲು, ಪುಷ್ಪಾವತಿ ಬಾಳಿಲ, ಬಾಲಕೃಷ್ಣ ಮಣಿಯಾಣಿ ಕೇರ್ಪಳ, ಬಾಲಕೃಷ್ಣ ಅಡ್ಡಬೈಲು, ಗಿರೀಶ್ ಕುಮಾರ್ ಅಶ್ವಿನಿ, ಶಾರದಾ ರಾಮನ್, ಹರ್ಷಿತ ಬಳ್ಪ ಆಯ್ಕೆಯಾದರು.