ಮೇನಾಲ :ಎಸ್ ಎಸ್ ಎಫ್ ಸುಳ್ಯ ಡಿವಿಝನ್ ಸಾಹಿತ್ಯೋತ್ಸವ

0

ಬೆಳ್ಳಾರೆ ಸೆಕ್ಟರ್ ಚಾಂಪಿಯನ್,ಅಜ್ಜಾವರ ಸೆಕ್ಟರ್ ರನ್ನರ್ಸ್ ಅಪ್ ಪ್ರಶಸ್ತಿ

ಎಸ್ ಎಸ್ ಎಫ್ ಸುಳ್ಯ ಡಿವಿಝನ್ ವತಿಯಿಂದ ಮೇನಾಲದಲ್ಲಿ ನಡೆದ ಸೆಪ್ಟೆಂಬರ್ 15ರಂದು ತಾಲೂಕು ಮಟ್ಟದ ಸಾಹಿತ್ಯೋತ್ಸವದಲ್ಲಿ ಬೆಳ್ಳಾರೆ ಸೆಕ್ಟರ್ ಚಾಂಪಿಯನ್ ಮತ್ತು ಅಜ್ಜಾವರ ಸೆಕ್ಟರ್ ರನ್ನರ್ ಅಪ್ ಪ್ರಶಸ್ತಿ ಹಾಗೂ ಸುಳ್ಯ ಸೆಕ್ಟರ್ ತ್ರಿತೀಯ ಸ್ಥಾನ ಪಡೆದುಕೊಂಡಿದೆ.


ಸಾಹಿತ್ಯೋತ್ಸವದಲ್ಲಿ ಸುಮಾರು 130 ಕ್ಕೂ ಹೆಚ್ಚು ಕಲಾ ಸ್ಪರ್ಧೆಗಳು ನಡೆದು 250 ಕ್ಕೂ ಹೆಚ್ಚು ಸ್ಪರ್ಧಾರ್ತಿ ಗಳು ಭಾಗವಹಿಸಿದ್ದರು,
ಮದ್ಹ್ ಗಾನ,ಕನ್ನಡ, ಮಲಯಾಳಂ, ಉರ್ದು, ಇಂಗ್ಲಿಷ್, ಅರಬಿಕ್ ಮತ್ತು ಭಾಷಣ, ಕವಾಲಿ, ಬುರ್ದಾ, ಕ್ವಿಝ್ ಹೀಗೆ ಅನೇಕ ಸ್ಪರ್ಧಾ ಕಾರ್ಯಕ್ರಮಗಳು ಸಾಹಿತ್ಯೋತ್ಸವದಲ್ಲಿ ರಂಜಿಸಿದವು.

ಬೆಳಿಗ್ಗೆ ಆರಂಭಗೊಂಡ ಕಾರ್ಯಕ್ರಮವನ್ನು ಸಯ್ಯಿದ್ ಕುಂಞಿಕೋಯ ತಂಙಳ್ ರವರು ದುವಾ ಮೂಲಕ ಚಾಲನೆ ನೀಡಿದರು. ಡಿವಿಝನ್ ಸಮಿತಿಯ ಅಧ್ಯಕ್ಷ ರಿಯಾನ್ ಸಅದಿ ಬೆಳ್ಳಾರೆ ಅಧ್ಯಕ್ಷತೆ ವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಹಿರಿಯ ವಿಧ್ವಾಂಸರಾದ ಶೈಖುನಾ ಓಲೆ ಮಂಡಾವು ಉಸ್ತಾದ್ ರವರು ಪ್ರಾರ್ಥನೆ ನಿರ್ವಹಿಸಿದರು.
ಸಯ್ಯಿದ್ ಮೊಹಸಿನ್ ಅಲವಿ ತಂಙಳ್ ಎಲಿಮಲೆ, ಹಸ್ಸನ್ ಸಖಾಫಿ ಬೆಳ್ಳಾರೆ, ಎ ಬಿ ಅಶ್ರಫ್ ಸಅದಿ, ಹಾಜಿ ಮುಸ್ತಫಾ ಕೆ ಎಂ, ಅಬ್ದುಲ್ ರಹಿಮಾನ್ ಸಂಕೇಶ್, ಹಮೀದ್ ಬೀಜ ಕೊಚ್ಚಿ, ಹಮೀದ್ ಸುಣ್ಣಮೂಲೆ, ಜಬ್ಬಾರ್ ಸಖಾಫಿ, ಎಸ್ ಸಂಶುದ್ದಿನ್, ಕೆ ಎಸ್ ಉಮ್ಮರ್, ಶರೀಫ್ ಕಂಠಿ, ಸೇರಿದಂತೆ ನೂರಾರು ಮಂದಿ ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಾರೈಸಿದರು.
ಸ್ವಾದಿಕ್ ಮಾಸ್ಟರ್ ಸ್ವಾಗತಿಸಿ ಮುಕ್ತಾರ್ ಹಿಮಮಿ ಕಾರ್ಯಕ್ರಮ ನಿರೂಪಿಸಿದರು.
ಎಸ್ ಎಸ್ ಎಫ್ ಡಿವಿಷನ್ ಮತ್ತು ಸೆಕ್ಟರ್ ಸಮಿತಿಗಳ ಎಲ್ಲಾ ಪದಾಧಿಕಾರಿಗಳು ಸದಸ್ಯರು, ಕೆ ಎಂ ಜೆ, ಎಸ್ ವೈ ಎಸ್ ನ ಎಲ್ಲಾ ನಾಯಕರುಗಳು ಸದಸ್ಯರುಗಳು ಸಹಕರಿಸಿದರು.