ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್ ದ ಕ ಜಿಲ್ಲಾ ಹಾಗೂ ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿ ವೇದಿಕೆ ವತಿಯಿಂದ ಮಂಗಳೂರಿನ ದೇರಳಕಟ್ಟೆಯಲ್ಲಿ ಸೆ. 14 ರಂದು ನಡೆದ ರಾಜ್ಯ ಮಟ್ಟದ ಕವಿ ಗೋಷ್ಠಿ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸುಳ್ಯ ಮೂಲದ ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್ ರವರಿಗೆ ಸಮಾಜ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಅಬ್ದುಲ್ ರಹಿಮಾನ್ ರವರು ಓರ್ವ ಯಶಸ್ವಿ ಉದ್ಯಮಿಯಾಗಿ, ಸಮಾಜದ ಹತ್ತು ಹಲವು ಸೇವಾ ಕಾರ್ಯಗಳ ಮೂಲಕ ಜನಪ್ರಿಯರಾಗಿದ್ದಾರೆ. ಅಲ್ಲದೆ ಅವರು ನೀಡಿದ ಕಾರುಣ್ಯ ಸೇವೆ ಇಂದಿನ ಯುವ ಸಮೂಹಕ್ಕೆ ಮಾದರಿಯಾಗಿವೆ ಎಂದು ಅವರ ಸಾಧನೆಯನ್ನು ಗುರುತಿಸಿ 2025 ರ ಅವಾರ್ಡ್ ಸಮಾಜ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.









ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳು ಮತ್ತು ಪ್ರಯತ್ನಗಳನ್ನು ಹಾಗೂ ಮೈಲಿಗಲ್ಲನ್ನು ಅಂಗೀಕರಿಸುತ್ತಾ
ಈ ಸಮಾಜ ರತ್ನ ಪ್ರಶಸ್ತಿಯನ್ನು ಗಣ್ಯರ ಸಮಕ್ಷಮ ನೀಡಿ ಗೌರವಿಸಲಾಗುತ್ತಿದೆ ಎಂದು ಕವಿಗೋಷ್ಠಿ ಅಧ್ಯಕ್ಷರಾದ
ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿಯವರು ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು.
ಈ ಸಂಧರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎಚ್.ಭೀಮರಾವ್ ವಾಸ್ಕರ್, ಮಾದಕ ದ್ರವ್ಯ ವ್ಯಸನ ಮುಕ್ತ ಹೋರಾಟ ಸಮಿತಿಯ ಮುಖಂಡರಾದ ಇಕ್ಬಾಲ್ ಬಾಳಿಲ,ಸಮಾಜ ಸೇವಕ ಮಹಮ್ಮದ್ ಕುಕ್ಕುವಳ್ಳಿ ಸೇರಿದಂತೆ ವಿವಿಧ ಗಣ್ಯರುಗಳು ಉಪಸ್ಥಿತರಿದ್ದರು.










