ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು, ಅಜ್ಜಾವರ ವಲಯದ ದೊಡ್ಡೇರಿ ಕಾರ್ಯಕ್ಷೇತ್ರದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನೂತನ “ಅಮೃತ” ಮಹಿಳಾ ಜ್ಞಾನವಿಕಾಸ ಕೇಂದ್ರವು ಸೆ.14ರಂದು ಸ್ತ್ರೀ ಶಕ್ತಿ ಭವನ ದೊಡ್ಡೇರಿ ಯಲ್ಲಿ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ರವರು ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಚಂದ್ರಶೇಖರ.ಡಿ.ಕೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಕೊಡಿಯಾಲಬೈಲ್ ಶಾಲಾ ಮುಖ್ಯಶಿಕ್ಷಕರಾದ ಸವಿತಾ ಸುಬ್ಬಯ್ಯ ದೊಡ್ಡೇರಿ ಆಗಮಿಸಿದ್ದರು.









ಗೌರವ ಅತಿಥಿಗಳಾಗಿ ಶ್ರೀಮತಿ ಉಷಾ ಅಂಗನವಾಡಿ ಕಾರ್ಯಕರ್ತರು ದೊಡ್ಡೇರಿ , ಶ್ರೀಮತಿ ರೇವತಿ ದೊಡ್ಡೇರಿ ಭಜನಾ ಪರಿಷತ್ತು ಕೋಶಾಧಿಕಾರಿ , ಪೈಲಾರ್ ಲಕ್ಷ್ಮೀ ಜ್ಞಾನವಿಕಾಸ ಕೇಂದ್ರದ ಸಂಯೋಜಕರು ನಾಗವೇಣಿ, ನಿಕಟ ಪೂರ್ವ ಸಂಯೋಜಕಿ ಮನೋರಮಾ , ನಿಕಟಪೂರ್ವ ವಲಯ ಅಧ್ಯಕ್ಷರಾದ ಶ್ರೀಯುತ ಸುಂದರ ನಾಯ್ಕ್ ದೊಡ್ಡೇರಿ, CSC ನೋಡಲ್ ಅಧಿಕಾರಿಯಾಗಿರುವ ಹೇಮಂತ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಲಕ್ಷ್ಮೀ, ವಲಯದ ಮೇಲ್ವಿಚಾರಕರಾದ ಅನಿತಾ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಕುಮಾರಿ ನಿಶ್ಮಿತಾಳಿಗೆ ಮಾಸಾಶನ ಕಾರ್ಯಕ್ರಮದಡಿಯಲ್ಲಿ ವಿದ್ಯಾನಿಧಿ ಅನುದಾನ ವಿತರಣೆ ಮಾಡಲಾಯಿತು.
ಶೌರ್ಯ ವಿಪತ್ತು ಘಟಕದ ಸದಸ್ಯರು, ನವಜೀವನ ಸಮಿತಿಯ ಸದಸ್ಯರು, ಮಸಾಶನ ಪಡೆಯುತ್ತಿರುವ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಉಷಾಜ್ಯೋತಿ ಸ್ವಾಗತಿಸಿದರು.
ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು. ಪುಷ್ಪಾವತಿ ವಂದಿಸಿದರು.









