ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತ್ರೋಬಾಲ್ ಪಂದ್ಯಾಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

0

ಅರಂತೋಡು: ಶ್ರೀ ಸುಬ್ರಹ್ಮನ್ಯೇಶ್ವರ ಪಿಯು ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟದ ಬಾಲಕಿಯರ ವಿಭಾಗದದಲ್ಲಿ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ದ್ವಿತೀಯ ಸ್ಥಾನ ಪಡೆದು ಕೊಂಡಿತು.

ಅತ್ಯುತ್ತಮ ಎಸೆತಗಾರ್ತಿ ಯಾಗಿ ತಂಡದ ನಾಯಕಿ ದ್ವಿತೀಯ ವಿಜ್ಞಾನ ವಿಭಾಗದ ಚಿಂತನಾ ಪಿ ಪ್ರಶಸ್ತಿ ಪಡೆದು ಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾದರು ಹಾಗೂ ಸುಮ ಕೆ ಆರ್ ದ್ವಿತೀಯ ಕಲಾ ವಿಭಾಗ ಹಾಗೂ ಕೃತಿ ಎಂ ಎಸ್ ದ್ವಿತೀಯ ವಿಜ್ಞಾನ ವಿಭಾಗ ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.

ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಸುರೇಶ್ ವಾಗ್ಲೆ ಸರ್ ರವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ಶಾಂತಿ ಎ ಕೆ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ಜಯರಾಮ ಪಿ ಪಿ ತರಬೇತಿ ನೀಡಿರುತ್ತಾರೆ. ತಂಡದ ವ್ಯವಸ್ಥಾಪರಾಗಿ ಪದ್ಮಕುಮಾರ್ ಜಿ ಆರ್ ಸಹಕರಿಸಿದ್ದಾರೆ.