














ರಕ್ತ ಮತ್ತು ನೀರು ಜೊತೆಯಾಗಿ ಹರಿಯಲಾರದು ಎನ್ನುತ್ತಿದ್ದೋರು ರಕ್ತ ಮತ್ತು ಕ್ರಿಕೆಟ್ ಒಟ್ಟಾಗಿ ಆಡಬಹುದು ಎನ್ನುತ್ತಿರೋದರ ಹಿಂದಿನ ರಹಸ್ಯವೇನೆಂದು ಅರ್ಥವಾಗುತ್ತಿಲ್ಲ ” ಎಂದು ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಮುಖ್ಯಸಂಯೋಜಕರಾದ ಕೆ.ಪಿ.ಜಾನಿ ಹೇಳಿಕೆ ನೀಡಿದ್ದಾರೆ.
” ಇದೇ ಎಪ್ರಿಲ್ 22 ರಂದು ಪಹಲ್ಗಾಂ ಉಗ್ರವಾದಿ ಘಟನೆ ನಡೆದು ಇನ್ನೂ ಐದು ತಿಂಗಳುಗಳು ದಾಟಿಲ್ಲ. ಘಟನೆಯಲ್ಲಿ ತಾಯಿ ಭಾರತಾಂಬೆಯ ಹುತಾತ್ಮರಾದ ಮಕ್ಕಳ ರಕ್ತದ ಕಲೆಗಳು ಇನ್ನೂ ಭಾರತೀಯರ ಹೃದಯದಿಂದ ಮಾಸಿಲ್ಲ. ಅಷ್ಟರಲ್ಲೇ ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಪಾಕಿಸ್ತಾನದೊಂದಿಗೆ ಭಾರತ ತಂಡವನ್ನು ಆಡಲು ಒಪ್ಪಿಗೆ ಕೊಟ್ಟದ್ದು ಯಾಕೆ ಮತ್ತು ಯಾರ ಹಿತಾಸಕ್ತಿಗಾಗಿ ? ಕೇಂದ್ರದ ಒಬ್ಬ ಸಚಿವರು ಹೇಳ್ತಾರೆ – ‘ ಏಷ್ಯಾ ಕಪ್ ನಲ್ಲಿ ಭಾರತ ಆಡದೇ ಇದ್ದರೆ ಮುಂದೆ ಏಷ್ಯಾ ಕಪ್ ನಲ್ಲಿ ಆಡುವ ಅವಕಾಶವೇ ಸಿಗುತ್ತಿರಲಿಲ್ಲ ‘ ಎಂದು. ಇದು ತೀರಾ ಬಾಲಿಶವಾದ ಮತ್ತು ಖಂಡನಾರ್ಹವಾದ ಹೇಳಿಕೆ. ಹಾಗಾದರೆ ಭಾರತೀಯರ ಜೀವಕ್ಕಿಂತ ಬಿಜೆಪಿಯವರಿಗೆ ಏಷ್ಯಾ ಕಪ್ ಕ್ರಿಕೆಟ್ ಪ್ರಮುಖ ಎಂದಾಯ್ತು. ನಿಜವಾದ ರಾಷ್ಟ್ರಪ್ರೇಮಿಗಳಿಗೆ ಬಿಜೆಪಿಗರ ಈ ವಾದ ವಿಲಕ್ಷಣವಾಗಿ ಮಾತ್ರ ಕಾಣಲು ಸಾಧ್ಯ, ಒಂದುವೇಳೆ ಇದೇ ಕಾರ್ಯ ಕಾಂಗ್ರೆಸ್ ಆಡಳಿತ ಇದ್ದಾಗ ನಡೆದಿದ್ದರೆ ಬಿಜೆಪಿಯವರು ಏನು ಹೇಳುತ್ತಿದ್ದರು ? ಭಾರತೀಯ ಕಾನೂನಿಗನುಸಾರವಾಗಿಯೇ ಸಂವಿಧಾನಬದ್ದವಾಗಿ ನಮ್ಮದೇ ದೇಶದ ಬಡ ಅಲ್ಪಸಂಖ್ಯಾತರಿಗೆ ಶಕ್ತಿ ತುಂಬುವ ಏನಾದರೂ ಯೋಜನೆಗಳನ್ನು ಜಾರಿಗೆ ತಂದರೆ ಅದರ ವಿರುದ್ದ ಘೋರವಾಗಿ ಮಾತನಾಡುವ, ಪ್ರತಿಭಟನೆಗಳನ್ನು ಮಾಡುವ ಬಿಜೆಪಿ ನಾಯಕರು ಈ ವಿಷಯದಲ್ಲಿ ಬಾಯಿ ಬಿಚ್ಚದಿರೋದರ ಹಿಂದಿನ ತಾತ್ಪರ್ಯವೇನು ? ಇದು ಬಿಜೆಪಿಯ ಡಬಲ್ ಗೇಮ್ ರಾಜಕೀಯದ ಝಲಕ್ ಎನ್ನುವುದನ್ನು ಸಾಮಾನ್ಯ ಜನ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಒಂದು ಕಡೆ ಪಾಕಿಸ್ತಾನದೊಂದಿಗೆ ಈ ನೀತಿಯಾದರೆ ಮತ್ತೊಂದು ಕಡೆ ಒಮ್ಮೆ ಚೈನಾದ ಆಪ್ ಗಳನ್ನು ಮತ್ತು ಕೆಲವು ವಸ್ತುಗಳನ್ನು ನಿಷೇಧ ಮಾಡಿ ತಾವು ದೇಶ ಪ್ರೇಮಿಗಳು ಅಂತ ಸ್ವತಃ ಬೆನ್ನು ತಟ್ಟಿಕೊಳ್ಳುತ್ತಾರೆ, ನಂತರ ಚೈನಾಗೆ ಹೋಗಿ ಇಂಡಿಯಾ ಚೈನಾ ಭಾಯಿ ಭಾಯಿ ಅನ್ನುತ್ತಾರೆ. ಇವರಿಗೆ ಸ್ವಂತ ನಿಲುವೆನ್ನುವುದೇ ಇಲ್ಲ ಎನ್ನುವುದು ಇಂತಹಾ ನಿರ್ಧಾರಗಳಿಂದ ಸ್ಪಷ್ಟವಾಗುತ್ತಿದೆ. ಆದ್ದರಿಂದ ಇನ್ನಾದರೂ ಭಾರತಾಂಬೆಯ ಹುತಾತ್ಮ ಮಕ್ಕಳಿಗೆ ಅವರ ಜೀವಕ್ಕೆ ಗೌರವ ಕೊಟ್ಟು, ಭಾರತೀಯರ ಆತ್ಮಾಭಿಮಾನಕ್ಕೆ ಕಳಂಕವಾಗದೇ ಇರಲು ಏಷ್ಯಾಕಪ್ ಕ್ರಿಕೇಟ್ ನಲ್ಲಿ ಪಾಕಿಸ್ತಾನದೊಂದಿಗೆ ಮುಂದೆ ಆಡುವುದಿಲ್ಲ ಎನ್ನುವ ಸ್ಪಷ್ಟ ಮತ್ತು ಕಠಿಣ ತೀರ್ಮಾನ ಧೈರ್ಯ ತೋರಬೇಕು” ಎಂದು ಜಾನಿ ಕೆ.ಪಿ. ಒತ್ತಾಯಿಸಿದ್ದಾರೆ.










