ಪ್ರಜಾಧ್ವನಿ ಕರ್ನಾಟಕ ಇದರ ಸಭೆಯು ಸೆ.15ರಂದು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಎ. ಕೆ. ಇಬ್ರಾಹಿಂ ವಹಿಸಿದ್ದರು.
ಸಾಹುಕಾರ್ ಅಶ್ರಫ್ ಸ್ವಾಗತಿಸಿ, ಅಶೋಕ್ ಎಡಮಲೆ ಸಂವಿಧಾನ ಪೀಠಿಕೆ ವಾಚಿಸಿದರು.
ಲೂಕಾಸ್ ಟಿ. ಐ. ಪ್ರಜಾಧ್ವನಿ ಸಂಘಟನೆಯ ಬೈಲಾ ವನ್ನು ಮಂಡಿಸಿದರು.
ಬೈಲಾದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿ ಅಂತಿಮವಾಗಿ ಕೇಂದ್ರ ಸಮಿತಿಯವರಿಗೆ ಜವಾಬ್ದಾರಿ ವಹಿಸಲಾಯಿತು.















ಪ್ರಜಾಧ್ವನಿ ಕರ್ನಾಟಕ ಇದರ ಕೇಂದ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಅಶೋಕ್ ಎಡಮಲೆ ಆಯ್ಕೆಯಾದರು.
ಉಪಾಧ್ಯಕ್ಷರುಗಳಾಗಿ ಪ್ರವೀಣ್ ಮುಂಡೋಡಿ, ಜೂಲಿಯಾ ಕ್ರಾಸ್ತ, ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಪ್ರ. ಕಾರ್ಯದರ್ಶಿಯಾಗಿ ವಸಂತ ಪೆಲ್ತಡ್ಕ, ಜತೆ ಕಾರ್ಯದರ್ಶಿಗಳಾಗಿ ಸಾಹುಕಾರ್ ಅಶ್ರಫ್, ಲೂಕಾಸ್ ಟಿ. ಐ., ಪ್ರಮೀಳ ಪೆಲ್ತಡ್ಕ ಕೋಶಾಧಿಕಾರಿ ಯಾಗಿ : ಎ. ಕೆ. ಇಬ್ರಾಹಿಂ, ಕಾನೂನು ಸಲಹೆಗಾರರಾಗಿ ಕೆ. ಪಿ. ಮೋಹನ್ ಕಡಬ,ಮಾಧ್ಯಮ ವಕ್ತಾರರಾಗಿ ಮಹೇಶ್ ಬೆಳ್ಳಾರ್ಕರ್, ಭರತ್ ಕುಕ್ಕುಜಡ್ಕ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ದಿವಾಕರ ಪೈ, ಮಹಮ್ಮದ್ ಕುಂಜಿ ಗೂನಡ್ಕ, ಲಕ್ಷ್ಮೀಶ ಗಬ್ಲಡ್ಕ, ಮೋನಪ್ಪ ಕೊಲ್ಲಮೊಗ್ರ, ಕೆ. ಪಿ. ಜಾನಿ, ಶಿವಶಂಕರ್,
ಗೌರವ ಸಲಹೆಗಾರರಾಗಿ ಗೋಪಾಲ ಪೆರಾಜೆ, ಪ್ರಜಾಧ್ವನಿ ನ್ಯೂಸ್ ಪೋರ್ಟಲ್ ನಿರ್ವಾ ಹಕರಾಗಿ ಹರ್ಷಕುಮಾರ್ ಸುಳ್ಯ ಆಯ್ಕೆಯಾದರು.
ಸಭೆಯಲ್ಲಿ ಪಿ. ಸಿ. ಜಯರಾಮ, ಚೇತನ್ ಕಜೆಗದ್ದೆ, ಶಮೀರ್ ತಾಜ್ ಕಲ್ಲುಗುಂಡಿ ,ಭಾಗೀಶ ಕೆ. ಟಿ. ಮೊದಲಾದವರಿದ್ದರು.










