ಉದ್ಯಮ ರಂಗದಲ್ಲಿ 40 ವರ್ಷಗಳ ಅನುಭವವಿರುವ ಸಹನ ಗ್ಲಾಸ್ & ಪ್ಲೈವುಡ್ ನವರ ನೂತನ ಮಳಿಗೆ ಸಹನ ಓಪನಿಂಗ್ ಸಲ್ಯೂಶನ್ ಮಳಿಗೆ ಶುಭಾರಂಭ

0

ದಿ|ಮಹಮ್ಮದ್ ಸಹನರವರ ಕಲಿಸಿದ ವಿಶ್ವಾಸಾರ್ಹ ಸೇವೆಯನ್ನು ಮಾಡಲು ಇನ್ನೊಂದು ಸಂಸ್ಥೆಯ ಸೇರ್ಪಡೆ: ಮಜೀದ್ ಸಹನ

ಸುಮಾರು 40 ವರ್ಷಗಳ ಹಿಂದೆ ಸುಳ್ಯ ಗಾಂಧಿನಗರದಲ್ಲಿ ದಿ|ಮಹಮ್ಮದ್ ಸಹನ ರವರು ಗಾಂಧಿನಗರ ಮಸೀದಿ ಬಳಿಯಲ್ಲಿರುವ ಫ್ಯಾನ್ಸಿ ಕಟ್ಟಡದಲ್ಲಿ ಗ್ಲಾಸ್ ಫ್ರೇಮ್ ವರ್ಕ್ಸ್ ಅಂಗಡಿಯನ್ನು ತೆರೆದು ಉದ್ಯಮ ಕ್ಷೇತ್ರವನ್ನು ಆರಂಭಿಸಿ 15 ವರ್ಷಗಳ ಕಾಲ ತಮ್ಮ ಉತ್ತಮ ಸೇವೆಯ ಮೂಲಕ ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು.

ಉದ್ಯಮವನ್ನು ವಿಸ್ತರಿಸಿ ದಿ| ಪಿ.ಎ ಹಮೀದ್ ಜೊತೆ ಸೇರಿ ಪಾಲುದಾರಿಕೆಯಲ್ಲಿ ಸಹನ ಎಂಬ ಹೆಸರಿನಲ್ಲಿ ಶಾಮಿಯಾನ ಹಾಗೂ ಮದುವೆ ಸಭೆ ಸಮಾರಂಭಗಳಿಗೆ ಬೇಕಾಗುವ ಎಲ್ಲಾ ರೀತಿಯ ಸಾಮಾಗ್ರಿಗಳನ್ನು ಒಂದೇ ಸೂರಿನಡಿಯಲ್ಲಿ ಸೇರಿಸಿ ಶಾಮಿಯಾನ ಉದ್ಯಮವನ್ನು ಪ್ರಾರಂಭಿಸಿದರು. ಈಗಲೂ ಸುಳ್ಯದಲ್ಲಿ ಸಹನ ಶಾಮಿಯಾನ ಮನೆಮಾತಾಗಿ ಜನರ ಪ್ರೀತಿ ಮತ್ತು ವಿಶ್ವಾಸರ್ಹ ಸೇವೆಯಲ್ಲಿ ಮುಂದುವರಿಯುತ್ತಿದೆ.

ಉದ್ಯಮವನ್ನು ಮತ್ತೆ ವಿಸ್ತರಿಸುವ ಸಹನ ಗ್ಲಾಸ್ ಎಂಡ್ ಪ್ಲೈವುಡ್ ಪ್ರಾರಂಭಿಸಿದರು ಮತ್ತೆ ಸಂಸ್ಥೆಯನ್ನು ಜನತಾ ಕಾಂಪ್ಲೆಕ್ಸನಲ್ಲಿ ವಿಸ್ತರಿಸಿದ ಸಂದರ್ಭದಲ್ಲಿ ತಂದೆ ಜೊತೆಜೊತೆಯಾಗಿ ಉದ್ಯಮದಲ್ಲಿ ಕೈಜೊಡಿಸಿ ಕೊಂಡು ದಿ.ಮಹಮ್ಮದ್ ಸಹನ ರವರ ಪುತ್ರ ಅಬ್ದುಲ್ ಮಜೀದ್ ತಂದೆ ತಕ್ಕ ಮಗನಾಗಿ ಉದ್ಯಮ ತಂದೆಯ ಜೊತೆಯಲ್ಲಿ ಕಲಿತು ತಂದೆಗೆ ಬೆನ್ನಲುಬಾಗಿ ನಿಂತು ಯಶಸ್ವೀ ಉದ್ಯಮಿಯಾಗಿ ಬೆಳೆದ ಯುವ ಉದ್ಯಮಿಯಾಗಿ ಬೆಳೆದ ಇದೇ ಸಂಧರ್ಭದಲ್ಲಿ ತಂದೆ ನಿಧನರಾಗುತ್ತಾರೆ ಮತ್ತೆ ತಂದೆ ಅಡಿಪಾಯ ಹಾಕಿಕೊಟ್ಟ ಉದ್ಯಮವನ್ನು ಮುಂದುವರಿಸಿ ತಾನು ಮಾಡುತ್ತಿರುವ ಉದ್ಯಮವನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ
ಅತ್ಯಾಧುನಿಕ ಶೈಲಿಯು ವಿವಿಧ ವಿನ್ಯಾಸದ ಮನೆಯ ಬಾಗಿಲು ಮತ್ತು ಕಿಟಕಿಗಳಿಗೂ ಇನ್ನಿತರ ಮನೆ ಒಳ ವಿನ್ಯಾಸಗಳಿಗೆ ಬೇಕಾಗುವ ಸಾಮಗ್ರಿಗಳ ಒಳಗೊಂಡ ವಿಶೇಷ ಮಳಿಗೆ ಸಹನ ಒಪನಿಂಗ್ ಸಲ್ಯೂಶನ್ ಸಂಸ್ಥೆ ಗಾಂಧಿನಗರದ ಮಸೀದಿಯ ಮುಂಬಾಗದಲ್ಲಿ ಗೋಪಿಕಾ ಕಟ್ಟಡದ ಮೋರ್ ಸೂಪರ್ ಮಾರ್ಕೇಟ್ ನ ಮೇಲಿನ ಮಹಡಿಯಲ್ಲಿ ಸೆ 22 ರಂದು ಶುಭಾರಂಭ ಗೊಳ್ಳಲಿದೆ.‌


ಮಳಿಗೆಯಲ್ಲಿ ಗ್ಲಾಸ್ & ಪ್ಲೈವುಡ್ ಇದಕ್ಕೆ ಸಂಬಂಧಿಸಿದ ಎಲ್ಲಾ ಬಿಡಿಭಾಗಗಳು, ಅತ್ಯಾಧುನಿಕ ಶೈಲಿಯ ಎಲ್ಲಾ ತರಹದ ಕರ್ಟನ್ ಗಳು, ಎಲ್ಲಾ ತರಹದ ಡೋರ್ ಗಳು ಮತ್ತು ಅದಕ್ಕೆ ಬೇಕಾಗುವ ಲಾಕ್ ಮತ್ತು ಅಲಂಕಾರಿಕ ವಸ್ತುಗಳು, ಸೆಪ್ಟಿಲಾಕ್ ಮತ್ತು ಲಾಕರ್, ಮೀರರ್, ಡ್ರೆಸಿಂಗ್ ಮೀರರ್, ಎಲ್ಇಡಿ ಮೀರರ್, ಬುಲೆಟ್ ಮತ್ತು ಬ್ರಾಸ್ ಕಂಪೆನಿಯ ಕಾರ್ಪೆಂಟರ್ ಟೂಲ್ ಕಿಟ್ಟ್, ಬ್ರಾಸ್ ಹ್ಯಾಂಡಲ್ಸ್, ಕ್ಯಾಬಿನೆಟ್ ಹ್ಯಾಂಡಲ್ಸ್, ಗ್ರೋದೆಜ್, ಯುರೋಪ, ಏಲ್ ಸೇರಿದಂತೆ ಅನೇಕ ಕಂಪೆನಿಗಳ ಲಾಕ್ ಹಾಗೂ ಇನ್ನಿತರ ಪಿಟ್ಟಿಂಗ್ ಸಾಮಾಗ್ರಿಗಳು, ಜುಲ ಚೈನ್, ಮರದ ಡೋರ್, ಪ್ಲೈವುಡ್ ಡೋರ್, ಸ್ಟೀಲ್ ಡೋರ್, ಪಿವಿಸಿ ಡೋರ್, ಡಬ್ಲ್ಯೂ ವಿಸಿ ಡೋರ್, ಯುಪಿವಿಸಿ ಡೋರ್, ಡೋರ್ ಪ್ರೇಮ್ ಮತ್ತು ವುಡ್, ಗ್ಲಾಸ್, ವಿಂಡೋ& ವಿಂಡೋ ಪ್ರೇಮ್, ಟಪನ್ ಗ್ಲಾಸ್ ಮತ್ತು ಗ್ಲಾಸ್ ಪಿಟ್ಟಿಂಗ್ಸ್, ಬಾತ್ ರೂಂ ಬೇಕಾಗುವ ಎಲ್ಲಾ ತರಹದ ಪಿಟ್ಟಿಂಗ್ ಸಾಮಾಗ್ರಿಗಳು, ಸೋಪಾ ಲೆಗ್ಸ್& ವೀಲ್ಸ್ ಐಟಂ ಗಳು, ಹಾಗೂ ಪುಲ್ ಶೀಟ್ ಲ್ಯಾಮಿನೇಟ್ ಡಿಸ್‌ಪ್ಲೇ ಸಾಮಾಗ್ರಿಗಳು ಸೇರಿದಂತೆ ಅನೇಕ ರೀತಿಯ ವಿನೂತನ ಶೈಲಿಯ ಡೋರ್ ಮತ್ತು ವಿಂಡೊ, ಲಾಕ್ ಸೇರಿದಂತೆ ಗೃಹ ಮತ್ತು ಕಟ್ಟಡಗಳಿಗೆ ಬೇಕಾಗುವ ಎಲ್ಲಾ ರೀತಿಯ ಪಿಟ್ಡಿಂಗ್ ಮತ್ತು ಬಿಡಿಬಾಗಗಳು ಒಂದೇ ಮಳಿಗೆಯಲ್ಲಿ ಸಿಗಲಿದೆ.


ಅಲ್ಲದೇ ನಿಮ್ಮ ಮನೆಗಳಿಗೆ ಬೇಕಾಗುವ ಸಂಪೂರ್ಣ ಬೆಡ್ ರೂಂ ಸೆಟ್ಟಿಂಗ್,ಕಿಚನ್ ಸೆಟ್ಟಿಂಗ್ ಗ್ರಾಹಕರಿಗೆ ಬೇಕಾಗುವ ರೀತಿಯಲ್ಲಿ ತಯಾರಿಸಿ ಕೊಡಲಾಗುವು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ