ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಕಡಬ ಇದರ ಬಾಲಾಡಿ ಅಂಗನವಾಡಿ ಕೇಂದ್ರದಿಂದ ವರ್ಗಾವಣೆಗೊಂಡಿರುವ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಯಮುನಾರವರ ಬೀಳ್ಕೊಡುಗೆ ಸಮಾರಂಭ ಸೆ.೧೯ ರಂದು ಹವಾಲ್ದಾರ್ ಕುಶಾಲಪ್ಪ ಗೌಡ ಸ್ಮಾರಕ ರಂಗಮಂದಿರದಲ್ಲಿ ನಡೆಯಿತು.









ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು ಇದರ ಜಿಲ್ಲಾ ನಿರೂಪಣಾಧಿಕಾರಿ ಶ್ರೀಮತಿ ರಶ್ಮಿ ಅಶೋಕ್ ನೆಕ್ರಾಜೆ, ಮೇಲ್ವಿಚಾರಕಿ ಶ್ರೀಮತಿ ಉಷಾ ಸಹಿತ ಹಲವಾರು ಗಣ್ಯರು ಹಾಜರಿದ್ದರು. ನೂರಾರು ಮಂದಿ ಹಿತೈಷಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.










