ನಿತ್ಯಾಧರ್ ವಾಳೆಯಲ್ಲಿ ಮೊಂತಿ ಹಬ್ಬ ಆಚರಣೆ ಮತ್ತು ಸಂಭ್ರಮ

0

ಸುಳ್ಯದ ಸೈಂಟ್ ಬ್ರಿಜಿಡ್ಸ್ ಧರ್ಮ ಕೇಂದ್ರಕ್ಕೆ ಒಳಪಟ್ಟ ನಿತ್ಯಾಧರ್ ಸಮುದಾಯದಲ್ಲಿ ಮಾತೆ ಮರಿಯಮ್ಮನವರ ಹುಟ್ಟು ಹಬ್ಬದ ಸಂಭ್ರಮಾಚರಣೆಯು ಫ್ರಾನ್ಸಿಸ್ ಮೊಂತೆರೋ ರಂಗಮನೆ ಹಳೆಗೇಟು ಇವರ ಮನೆಯಲ್ಲಿ ಸೆ. 21ರಂದು ನಡೆಯಿತು.

ಧರ್ಮ ಗುರುಗಳಾದ ರೇ.ಫಾ. ಆಲ್ವಿನ್ ಎಡ್ವರ್ಡ್ ಡಿಕುನಾ ರವರು ಮೇರಿ ಮಾತೆಯ ಪ್ರತಿಮೆಯನ್ನು ಆಶೀರ್ವಚನ ಮಾಡುವ ಮೂಲಕ ಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಾಳೆಯ ಸದಸ್ಯರಿಂದ ಪ್ರಾರ್ಥನಾ ವಿಧಿ ಹಾಗೂ ಮಕ್ಕಳು, ಹಿರಿಯರಿಂದ ಮೇರಿ ಮಾತೆಗೆ ಹೂವು ಅರ್ಪಿಸಲಾಯಿತು.

ಮಕ್ಕಳಿಗೆ ಹಾಗೂ ಹಿರಿಯರಿಗೆ ಕೆಲವೊಂದು ಸ್ಪರ್ಧೆಗಳನ್ನು ಈ ಸಂದರ್ಭದಲ್ಲಿ ನಡೆಸಲಾಯಿತು. ವಾಳೆಯ ಸಚೇತಕಿ ಸಿಸ್ಟರ್ ಜಯಂತಿ ಅತಿಥಿಯಾಗಿ ಮಾತನಾಡಿ ಸರ್ವರಿಗೂ ಹಬ್ಬದ ಶುಭಾಶಯ ಗಳನ್ನು ಕೋರಿದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಧರ್ಮ ಗುರುಗಳು ಬಹುಮಾನಗಳನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಾಳೆಯು ಸಮರ್ಥವಾಗಿ ತಮ್ಮ ಕೆಲಸಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಬರುತ್ತಿದ್ದು ಚರ್ಚಿನ ಮೊಂತಿ ಹಬ್ಬದ ಸಂದರ್ಭದಲ್ಲಿ ರಸ್ತೆಯ ಸ್ವಚ್ಛತೆಯನ್ನು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಈ ವಾಳೆಯ ಒಗ್ಗಟ್ಟನ್ನು ನೋಡಿ ನನಗೆ ತುಂಬಾ ಖುಷಿಯಾಗುತ್ತಿದೆ ಎಂದು ಗುಣಗಾನ ಮಾಡಿದರು ಮತ್ತು ಹಬ್ಬದ ಶುಭಾಶಯಗಳನ್ನು ಕೋರಿದರು.

ವೇದಿಕೆಯಲ್ಲಿ ಧರ್ಮ ಗುರುಗಳಾದ ರೆ.ಫಾ. ಓಲ್ವಿನ್ ಎಡ್ವರ್ಡ್ ಡಿಕುನಾ, ಚರ್ಚ್ ಪಾಲನಾ ಪರಿಷದ್ ಉಪಾಧ್ಯಕ್ಷರಾದ ನವೀನ್ ಮಚಾದೊ, ಅಸಿಸಿ ಸದನ ಕಾನ್ವೆಂಟ್ ಸುಪೀರಿಯರ್ ಸಿ. ಸಿಸಿಲಿ, ಸೈಂಟ್ ಬ್ರೆಜಿಡ್ಸ್ ಶಾಲಾ ಶಾಲಾ ಮುಖ್ಯ ಶಿಕ್ಷಕಿ ಸಿ. ಅಂತೋನಿಮೇರಿ, ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಸ್ಟೆಲ್ಲಾ ಮೇರಿ, ನಗರ ಪಂಚಾಯತ್ ಸದಸ್ಯರಾದ ಡೇವಿಡ್ ಧೀರ ಕ್ರಾಸ್ತ, ವಾಳೆಯ ಗುರಿಕಾರರಾದ ಪ್ಲೇವಿ ಡಿಸೋಜಾ, ಸಿಸ್ಟರ್ ಜಯಂತಿ ಉಪಸ್ಥಿತರಿದ್ದರು.
ಪ್ರಿಯಾ ಮತ್ತು ಬಳಗದವರು ಕಾರ್ಯಕ್ರಮ ನಿರೂಪಿಸಿದರು. ಡ್ರೀಮ್ಸ್ ಟೀಮ್ ಸುಳ್ಯ ಕಾರ್ಯಕ್ರಮದ ಚಿತ್ರೀಕರಣ ನೆರವೇರಿಸಿಕೊಟ್ಟರು. ಎಲ್ಲರಿಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಪ್ಲೇ ವಿ ಸೋಜ ಸ್ವಾಗತಿಸಿ, ನವೀನ್ ಮಚಾದೊ ಧನ್ಯವಾದ ಸಮರ್ಪಿಸಿದರು.