ಸರಕಾರಕ್ಕೆ ಮನವಿ ಸಲ್ಲಿಸಲು ನಿರ್ಧಾರ
ಪೆರಾಜೆ, ಸಂಪಾಜೆ, ಅರಂಬೂರು ಸೇರಿದಂತೆ ಸುಳ್ಯ ತಾಲೂಕಿನಾದ್ಯಂತ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಕಾಡಾನೆ ಉಪಟಳ ಹೆಚ್ಚಾಗಿದ್ದು ಇದರಿಂದ ಹೆಚ್ಚಿನ ಕೃಷಿಕರು ಸಮಸ್ಯೆಗೆ ಒಳಗಾಗಿದ್ದು, ಈ ಹಿನ್ನಲೆ ಆನೆ ಹಾವಳಿ ಸಮಸ್ಯೆ ಕುರಿತು ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್‌ನ ಶಾಸಕರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸೆ.25 ರಂದು ಸಭೆ ನಡೆಸಲಾಯಿತು.




ತಾಲೂಕಿನಾದ್ಯಂತ ಕಾಡಾನೆ ಉಪಟಳ ಹೆಚ್ಚಾಗಿದ್ದು ಕೃಷಿಯನ್ನು ಹಾಳು ಸಂಪೂರ್ಣ ಹಾಳುಮಾಡುತ್ತಿದೆ.ಇದರಿಂದ ಕೃಷಿಯನ್ನು ಅವಲಂಬಿಸಿದ ಕೃಷಿಕರು ಸಮಸ್ಯೆಗೆ ಪಾಲಾಗಿದ್ದಾರೆ. ಹಾಗೂ. ಪೂಮಲೆ ಕಾಡಿನಿಂದ ಬರುವ ಆನೆಗಳ ಹಿಂಡು ರಸ್ತೆಯ ಮುಖಾಂತರ ಕೃಷಿಕರ ತೋಟಗಳಿಗೆ ನುಗ್ಗಿ ಅರಂಬೂರಿನಿಂದ ಪೆರಾಜೆ ತನಕ ವ್ಯಾಪಕವಾಗಿ ಹಾನಿ ಮಾಡಿದೆ. 9 ಆನೆಗಳ ಹಿಂಡು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಕಾಣಿಸಿಕೊಂಡು ಭೀತಿ ಹುಟ್ಟಿಸುತ್ತಿವೆ. ಅಲ್ಲದೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆನೆ ಹಾವಳಿ ಹೆಚ್ಚಾಗಿರುವ ಕುರಿತು ಚರ್ಚೆ ನಡೆಯಿತು.ಆನೆ ಹಾವಳಿ ತಡೆಗೆ ಹೆಚ್ಚು ಆನೆ ಕಂದಕ ನಿರ್ಮಾಣ ಮಾಡಬೇಕು, ಸೋಲಾರ್ ಬೇಲಿ ನಿರ್ಮಾಣಕ್ಕೆ ಸಹಾಯಧನ ಹೆಚ್ಚಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಆನೆ ಕಂದಕದ ಜೊತೆಗೆ ಅಲ್ಲಲ್ಲಿ ಕಾಂಕ್ರೀಟ್ ಸ್ಲಾಬ್‌ಗಳ ನಿರ್ಮಾಣ ಮಾಡಬೇಕು ಎಂದು ಸೂಚಿಸಲಾಯಿತು.ಸಹಾಯ ಧನ ನೀಡುತ್ತಿದ್ದು ಅದನ್ನು ಹೆಚ್ಚಿಸಿ ಶೇ.75ರಷ್ಟು ಸಹಾಯ ಧನ ನೀಡಬೇಕು ಎಂದು ಆಗ್ರಹಿಸಲಾಯಿತು.ಕಂದಕ ನಿರ್ಮಾಣಕ್ಕೆ ಹೆಚ್ಚು ಅನುದಾನ ನೀಡಬೇಕು, ಸೋಲಾರ್ ಬೇಲಿ ನಿರ್ಮಾಣಕ್ಕೆ ಸಹಾಯಧನ ಹೆಚ್ಚಿಸಬೇಕು ಎಂಬ ಬೇಡಿಕೆ ಮುಂದಿರಿಸಿ ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಹಾಗೂ ಕೃಷಿಕರಾದ ಪಿ.ಬಿ.ಪ್ರಭಾಕರ ರೈ ನೇತೃತ್ವದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರ ಮೂಲಕ ನಿಯೋಗ ತೆರಳಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಸಂಬಂಧಪಟ್ಟವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.





ಸಭೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಪೈ, ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್, ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಸುಬೋಧ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ಪಿ.ಬಿ. ಪ್ರಭಾಕರ ರೈ ಸುಧಾಕರ ಎ.ಜಿ, ಜಗದೀಶ್ ಸರಳಿಕುಂಜ, ಉಮಾಶಂಕರ ಎ.ಜಿ, ಚಿನ್ನಪ್ಪ ಚಿಟ್ಟನ್ನೂರ್, ನಾರಾಯಣ ಎಂ.ಎಲ್, ಶಾಸಕರಾದ ಆಪ್ತ ಕಾರ್ಯದರ್ಶಿಗಳಾದ ಹರೀಶ್, ಪ್ರಸಾದ್ ಕಾಟೂರು, ಧೀರೇಶ್ ನಡುಬೈಲು ಮತ್ತಿತರರು ಉಪಸ್ಥಿತರಿದ್ದರು.











