ತಾಲೂಕು ಪಂಚಾಯತ್ ಮಡಿಕೇರಿ ಕೊಡಗು, ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಸಂಪಾಜೆ ಕೊಡಗು, ಗ್ರಾಮ ಪಂಚಾಯತ್ ಸಂಪಾಜೆ ಕೊಡಗು ಇವುಗಳ ಉಪಸ್ಥಿತಿಯಲ್ಲಿ ಸೆ. ೨೪ ರಂದು ಸಂಜೀವಿನಿ ಸಂತೆಮೇಳ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮವು ಸಂಪಾಜೆ ಕೊಡಗು ಗ್ರಾಮ ಪಂಚಾಯತ್ ಸಭಾಂಗಣ ನಡೆಯಿತು. ಶ್ರೀಮತಿ ಭಾರತಿ ಡಿ. ಸಿ. ಹಾಗೂ ವಿಮಲಾ ಬಿ. ವೈ ಪ್ರಾರ್ಥನೆ ಮಾಡಿದರು.
















ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರಮಾದೇವಿ ಬಾಲಚಂದ್ರಕಳಗಿಯವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಸಂಜೀವಿನಿ ಒಕ್ಕೂಟ ಅಧ್ಯಕ್ಷರಾದ ಶ್ರೀಮತಿ ವಾಣಿ ಜಗದೀಶ್ ಕೆದಂಬಾಡಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಕುಮಾರ್ ಚೆದ್ಕಾರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪೂರ್ಣಿಮ, ಅರೋಗ್ಯ ಕಾರ್ಯಕರ್ತೆ ಶ್ರೀಮತಿ ಅರ್ಚನಾರವರು ಉಪಸ್ಥಿತರಿದ್ದರು.
ಒಕ್ಕೂಟದ ಸದಸ್ಯರುಗಳಿಗೆ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ತೀರ್ಪುಗಾರರಾಗಿ ಶ್ರೀಮತಿ ಲೀಲಾವತಿ ಕಲಾಯಿ, ಶಿಕ್ಷಕರಾದ ವಿಕ್ರಾಂತ್ ಎಂ. ಬಿ. ಹಾಗೂ ಸುನಿಲ್‌ರವರು ಸಹಕರಿಸಿದರು. ಶ್ರೀಮತಿ ಮೀನಕುಮಾರಿ ಕೆ.ಸಿ. ಸ್ವಾಗತ ಹಾಗೂ ಶ್ರೀಮತಿ ಆರತಿ ಕೆ. ಸಿ. ವಂದಿಸಿದರು. ಶ್ರೀಮತಿ ಪುಷ್ಪಾವತಿ ಕೆ.ವಿ. ಕಾರ್ಯಕ್ರಮ ನಿರೂಪಿಸಿದರು.










