ಏಷ್ಯಾ ಪೆಸಿಫಿಕ್ HRM ವತಿಯಿಂದ ಕೊಡಮಾಡುವ ಅತ್ಯುತ್ತಮ ಪ್ರಶಸ್ತಿಗಳಲ್ಲೊಂದಾದ ಕರ್ನಾಟಕ ಅತ್ಯುತ್ತಮ ಉದ್ಯೋಗದಾತ ಪ್ರಶಸ್ತಿಗೆ ಫಾರ್ಮೆಡ್ ಲಿಮಿಟೆಡ್ ಕಂಪನಿಯನ್ನು ಆಯ್ಕೆ ಮಾಡಿ ಸೆಪ್ಟೆಂಬರ್ 18 ರಂದು ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ತಾಜ್ ಹೋಟೆಲ್ ನಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.









ಕರ್ನಾಟಕ ಅತ್ಯುತ್ತಮ ಉದ್ಯೋಗದಾತ ಪ್ರಶಸ್ತಿಯನ್ನು ಫಾರ್ಮೆಡ್ ಲಿಮಿಟೆಡ್ ನ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಉಮ್ಮರ್ ಬೀಜದಕಟ್ಟೆಯವರು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಫಾರ್ಮೆಡ್ ಲಿಮಿಟೆಡ್ ನ ಮಾನವ ಸಂಪನ್ಮೂಲ ವ್ಯವಸ್ಥಾಪಕರಾದ ಶ್ರೀ ರವಿಕುಮಾರ್ ಮತ್ತು ಮಾನವ ಸಂಪನ್ಮೂಲ ಅಧಿಕಾರಿಯವರಾದ ಶ್ರೀ ಅರವಿಂದ್ ಉಪಸ್ಥಿತರಿದ್ದರು.










