ದೇವಿಯ ಪಾತ್ರಿ ಹಾಗೂ
ದೈವದ ಪಾತ್ರಿಯವರಿಂದ ದರ್ಶನ ಸೇವೆ, ಭಕ್ತರಿಗೆ ಅಭಯದ ನುಡಿ
ಭಕ್ತರಿಂದ ಕ್ಷೇತ್ರದಲ್ಲಿ ಹರಕೆಯ ತುಲಾಭಾರ ಸೇವೆ ಸಮರ್ಪಣೆ

ಉಬರಡ್ಕ ಮಿತ್ತೂರು ಗ್ರಾಮದ ವ್ಯಾಪ್ತಿಯ ಉದಯಗಿರಿ ಕಮಿಲಡ್ಕ ಶ್ರೀ ದುರ್ಗಾದೇವಿ ಮಂದಿರ,
ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಹಾ ನವರಾತ್ರಿ ಉತ್ಸವವು
ಸೆ. 30 ರಂದು ಭಕ್ತಿ ಸಂಭ್ರಮ ದಿಂದ ಜರುಗಿತು.








ಸೆ. 22 ರಂದು ಪ್ರಾತಕಾಲ ಶ್ರೀದೇವಿಯು ಗದ್ದಿಗೇರಯುವ ಕಾರ್ಯಕ್ರಮ ನಡೆಯಿತು.
ಸೆ. 27 ರಂದು ಬೆಳಗ್ಗೆ ಹೊಸ ಅಕ್ಕಿ ನವನ್ನ ಕದಿರು ಕಟ್ಟುವ ಕಾರ್ಯಕ್ರಮ ನಡೆಯಿತು.
ಸೆ. 30 ರಂದು ಬೆಳಗ್ಗೆ ಸ್ಥಳೀಯ ಭಜಕರಿಂದ ಭಜನಾ ಕಾರ್ಯಕ್ರಮ ನಡೆದು ಬಳಿಕ ಶ್ರೀ ದುರ್ಗಾದೇವಿ ಮತ್ತು ಶ್ರೀ ಮಹಾವಿಷ್ಣುಮೂರ್ತಿ ದೈವದ ದರ್ಶನ ಸೇವೆಯು ದೇವಿಯ ಪಾತ್ರಿ ಧರ್ಮದರ್ಶಿಗಳಾದ ರವಿಪ್ರಸಾದ್ ಕಮಿಲಡ್ಕ ಹಾಗೂ ಮಹಾವಿಷ್ಣುಮೂರ್ತಿ ದೈವದ ಪಾತ್ರಿ ರಾಮ ಮಣಿಯಾಣಿ ಆಲೆಟ್ಟಿ ಯವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಭಕ್ತರಿಗೆ ದರ್ಶನ ಪಾತ್ರಿಯವರಿಂದ ಅಭಯದ ನುಡಿ ನೀಡುವುದರೊಂದಿಗೆ ಪ್ರಸಾದ ವಿತರಿಸಲಾಯಿತು. ಬಳಿಕ ಮಾರಿಕಳ ಪ್ರವೇಶವಾಗಿ ಭಕ್ತರಿಂದ ದೇವಿಯ ಸನ್ನಿದಾನದಲ್ಲಿ ಹರಕೆಯ ತುಲಾಭಾರ ಸೇವೆ ಸಮರ್ಪಣೆಯಾಯಿತು.
ಈ ಸಂದರ್ಭದಲ್ಲಿ ದೇವಿಗೆ ಹರಕೆ ಒಪ್ಪಿಸಲಾಯಿತು. ಮಧ್ಯಾಹ್ನ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಿತು.
ಊರಿನ ಹಾಗೂ ಪರ ಊರಿನ ಭಕ್ತರು ಉತ್ಸವದಲ್ಲಿ ಪಾಲ್ಗೊಂಡರು.
ಕ್ಷೇತ್ರದಧರ್ಮದರ್ಶಿಗಳಾದ ರವಿಪ್ರಸಾದ್ ಕಮಿಲಡ್ಕ, ದೈವದ ಪಾತ್ರಿ ರಾಮ ಮಣಿಯಾಣಿ, ಗುಳಿಗ ದೈವದ ಪೂಜಾರಿ ಶಶಿಧರ ಕಮಿಲಡ್ಕ,
ಕುಟುಂಬದ ಹಿರಿಯರಾದ
ವಿಶ್ವನಾಥ ಪೂಜಾರಿ, ಲೋಕೇಶ್ ಕೋಟ್ಯಾನ್ ಕಮಿಲಡ್ಕ ಹಾಗೂ ಕುಟುಂಬದ ಸದಸ್ಯರು ಮತ್ತು ಸ್ಥಳೀಯ ಭಕ್ತಾದಿಗಳು ಸಹಕರಿಸಿದರು.










