









ಎಒಎಲ್ಇ ಕಮಿಟಿ ಬಿ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಅಯುಧ ಪೂಜೆ ಮತ್ತು ಶ್ರೀ ಶಾರದಾ ಪೂಜೆ ಸೆ. 30ರಂದು ನಡೆಯಿತು.
ಬೆಳಿಗ್ಗೆ ಎಒಎಲ್ಇ ಕಮಿಟಿ ಬಿ ಆಡಳಿತ ಕಚೇರಿ ಮತ್ತು ಕೆವಿಜಿ ಪವರ್ ಹೌಸ್ ನಲ್ಲಿ ಗಣಪತಿ ಹವನ, ಕೆವಿಜಿ ಇಂಜಿನಿಯರಿಂಗ್, ಡೆಂಟಲ್, ಪಾಲಿಟೆಕ್ನಿಕ್, ಐಟಿಐ ಸೇರಿದಂತೆ ಕಮಿಟಿ ಬಿ ಆಡಳಿತಕ್ಕೊಳಪಟ್ಟ ವಿದ್ಯಾಸಂಸ್ಥೆಗಳಲ್ಲಿ ಆಯುಧ ಪೂಜೆ ಬಳಿಕ ವಾಹನ ಪೂಜೆ ನಡೆಯಿತು. ಮಧ್ಯಾಹ್ನ ಕೆವಿಜಿ ಐಪಿಎಸ್ ಆವರಣದಲ್ಲಿ ಶಾರದಾ ಪೂಜೆ ಪುರೋಹಿತ್ ನಾಗರಾಜ್ ಭಟ್ಟರ ನೇತೃತ್ವದಲ್ಲಿ ನಡೆಯಿತು. ಎಒಎಲ್ಇ ಕಮಿಟಿ ಬಿ ಅಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ, ಕಾರ್ಯದರ್ಶಿ ಡಾ. ಜ್ಯೋತಿ ಆರ್. ಪ್ರಸಾದ್, ಕೆವಿಜಿ ಡೆಂಟಲ್ ಕಾಲೇಜು ಎಕ್ಸಿಕ್ಯುಟಿವ್ ಡೈರೆಕ್ಟರ್ ಮೌರ್ಯ ಆರ್. ಕುರುಂಜಿ, ಎಒಎಲ್ಇ ಕಮಿಟಿ ಬಿ ನಿರ್ದೇಶಕಿ ಡಾ. ಅಭಿಜ್ಞಾ ಕೆ.ಆರ್, ವಿವಿಧ ವಿದ್ಯಾಸಂಸ್ಥೆಗಳ ಸಲಹಾ ಸಮಿತಿ ಸದಸ್ಯರುಗಳಾದ ಎನ್.ಎ. ರಾಮಚಂದ್ರ, ಸಂತೋಷ್ ಜಾಕೆ, ದಿನೇಶ್ ಮಡಪ್ಪಾಡಿ, ಗಂಗಾಧರ ಪಿ.ಎಸ್, ಎಸ್.ಎನ್. ಮನ್ಮಥ, ದಯಾನಂದ ಕುರುಂಜಿ, ಪದ್ಮನಾಭ ಪಾತಿಕಲ್ಲು, ಗಿರೀಶ್ ಕಲ್ಲುಗದ್ದೆ, ಜಯಪ್ರಕಾಶ್ ಕುಂಚಡ್ಕ, ಎಒಎಲ್ಇ ಕಮಿಟಿ ಬಿ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ಕೆವಿಜಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಹಾಗೂ ಆಯುಧ ಪೂಜಾ ಸಮಿತಿ ಅಧ್ಯಕ್ಷ ಡಾ. ಸುರೇಶ್, ಕಚೇರಿ ಅಧೀಕ್ಷಕರಾದ ನಾಗೇಶ್ ಕೊಚ್ಚಿ, ಕೆವಿಜಿ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಅಣ್ಣಯ್ಯ, ಕಚೇರಿ ಅಧೀಕ್ಷಕರಾದ ಶಿವರಾಮ ಕೇರ್ಪಳ, ಪ್ರಸನ್ನ ಕಲ್ಲಾಜೆ, ಕೆವಿಜಿ ಐಟಿಐ ಪ್ರಾಂಶುಪಾಲರಾದ ದಿನೇಶ್ ಮಡ್ತಿಲ, ಕೆವಿಜಿ ಐಟಿಐ ಭಾಗಮಂಡಲ ಪ್ರಾಂಶುಪಾಲರಾದ ಶ್ರೀಕಾಂತ್ ಕುಡೆಕಲ್ಲು, ಕೆವಿಜಿ ಅಮರಜ್ಯೋತಿ ಪಿಯು ಕಾಲೇಜು ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರ, ಕೆವಿಜಿಐಪಿಎಸ್ ಉಪಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಆಯುಧ ಪೂಜಾ ಸಮಿತಿ ಕಾರ್ಯದರ್ಶಿ ವಸಂತ ಕಿರಿಭಾಗ, ಕೆವಿಜಿ ಡೆಂಟಲ್ ಕಾಲೇಜು ಆಡಳಿತಾಧಿಕಾರಿ ಮಾಧವ ಬಿಟಿ, ಸೇರಿದಂತೆ ವಿವಿಧ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಆಡಳಿತಾಧಿಕಾರಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾಸಂಸ್ಥೆಗಳ ಸಲಹಾ ಸಮಿತಿ ಸದಸ್ಯರು, ಡಾ. ರೇಣುಕಾಪ್ರಸಾದರ ಆಪ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ಭೋಜನ ನಡೆಯಿತು.










