ನಿವೃತ್ತ ಪ್ರಾಂಶುಪಾಲ ದಿ.ಡಿ.ಎಸ್.ಕುಶಾಲಪ್ಪ ಗೌಡರಿಗೆ ಸುಳ್ಯ‌ ಜೂನಿಯರ್‌ ಕಾಲೇಜಿನಲ್ಲಿ ‌ಶ್ರದ್ದಾಂಜಲಿ ಸಭೆ

0

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿ ನಿವೃತ್ತರಾದ ದಿ.‌ಡಿ.ಎಸ್. ಕುಶಾಲಪ್ಪ ಗೌಡರು ಸೆ.30ರಂದು ನಿಧನರಾಗಿದ್ದು, ಅವರಿಗೆ ಶ್ರದ್ಧಾಂಜಲಿ ಸಭೆಯು ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಅಮೃತಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಬಿ.ಸದಾಶಿವ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಸುಳ್ಯ‌ ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು, ಅರೆಭಾಷೆ ಅಕಾಡೆಮಿ‌ ಸದಸ್ಯ ಡಾ.ಎನ್.ಎ. ಜ್ಞಾನೇಶ್, ಉದ್ಯಮಿ ಶಶಿಧರ ಶೆಟ್ಟಿ, ಶಿಕ್ಷಕಿ ಹೇಮಲತಾ ನುಡಿನಮನ ಸಲ್ಲಿಸಿದರು.

ಬಳಿಕ‌‌ ಮೌನಪ್ರಾರ್ಥನರ ಸಲ್ಲಿಸಲಾಯಿತು.

ಕಾಲೇಜಿನ ಉಪಪ್ರಾಂಶುಪಾಲ ಪ್ರಕಾಶ ಮೂಡಿತ್ತಾಯರು‌ ಕಾರ್ಯಕ್ರಮ ನಿರ್ವಹಿಸಿದರು.