ಹವೀಕ್ಷ ಎಸ್. ಆರ್ ರಾಜ್ಯ ಮಟ್ಟದ ಯೋಗದಲ್ಲಿ ಬಹುಮಾನ

0

ಹವೀಕ್ಷ ಎಸ್. ಆರ್ ಇವರಿಗೆ ರಾಜ್ಯ ಮಟ್ಟದ ಯೋಗದಲ್ಲಿ ಬಹುಮಾನ ಲಭಿಸಿದೆ.

ಶ್ರೀ ವೀರಮಾರುತಿ ಸೇವಾ ಟ್ರಸ್ಟ್ ಮೂಡಬಿದ್ರೆ ಇವರ ಆಶ್ರಯದಲ್ಲಿ ಮೂಡಬಿದಿರೆ ಶ್ರೀ ಶಾರದೋತ್ಸವದ ಪ್ರಯುಕ್ತ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ ಸೆ. 29 ರಂದು ನಡೆದಿದ್ದು, ಹಿರಿಯ ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಹವೀಕ್ಷ ಎಸ್. ಆರ್. ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಮೈಸೂರು ದಸರಾ ಹಿನ್ನೆಲೆಯಲ್ಲಿ ಸೆ.27 ರಂದು ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲೂ ಐದನೇ ಸ್ಥಾನ ಪಡೆದಿದ್ದಾರೆ.

ಇವರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರಿನ ಅಮರ ಯೋಗ ತರಬೇತಿ ಕೇಂದ್ರದ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ಅವರಿಂದ ಯೋಗ ತರಬೇತಿ ಪಡೆಯುತ್ತಿದ್ದಾರೆ. ಹರಿಹರ ಪಲ್ಲತಡ್ಕದ ಶ್ರೀಲತಾ. ಎಸ್.ಆರ್ ಮತ್ತು ರೋಹಿತಾಕ್ಷ ದಂಪತಿಗಳ ಪುತ್ರಿ.