ಸುಬ್ರಹ್ಮಣ್ಯ; ಗಾಂಧಿ ಜಯಂತಿ ಆಚರಣೆ , ಘನ ತ್ಯಾಜ್ಯ ಘಟಕದ ಸಿಬ್ಬಂದಿಗಳಿಗೆ ಗೌರವಾರ್ಪಣೆ

0

ನಿರಂತರ 15 ದಿನಗಳ ಕಾಲ ನಡೆದ ಸ್ವಚ್ಚತಾ ಅಭಿಯಾನಕ್ಕೆ ತೆರೆ

ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ವತಿಯಿಂದ ಅ.2 ರಂದು ಗಾಂಧಿ ಜಯಂತಿ ಪ್ರಯುಕ್ತವಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಯ ಘನ ತ್ಯಾಜ್ಯ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಘಟಕದ ಸಿಬ್ಬಂದಿಗಳಿಗೆ ಶಾಲು ಹೊದಿಸಿ ಸ್ಮರ
ಣಿಕೆಯನ್ನಿತ್ತು ಗೌರವಿಸಲಾಯಿತು. ಅಲ್ಲದೆ ನಿರಂತರ 15 ದಿನಗಳ ಕಾಲ ನಡೆದ ಸ್ವಚ್ಚತಾ ಅಭಿಯಾನ ಇಂದಿಗೆ ಕೊನೆಗೊಂಡಿತು.

ಗಾಂದಿ ಜಯಂತಿ ಆಚರಣಾ ಸಂದರ್ಭ ಸಂದರ್ಭದಲ್ಲಿ ಸುಬ್ರಮಣ್ಯ ಗ್ರಾ. ಪಂ. ಅಧ್ಯಕ್ಷೆ ಸುಜಾತಾ ಧನಂಜಯ, ಸ್ವಚ್ಛತಾ ಅಭಿಯಾನದ ನೋಡೆಲ್ ಅಧಿಕಾರಿಯಾದಂತಹ ಪಂಜ ವಲಯ ಅರಣ್ಯ ಅಧಿಕಾರಿಯಾಗಿರುವ ಶ್ರೀಮತಿ ಸಂಧ್ಯಾ, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್, ಸ್ವಚ್ಛತಾ ಅಭಿಯಾನದ ಬಗ್ಗೆ ಮಾತನಾಡಿದ, ಅಶೋಕ್ ಕುಮಾರ್ ಮೂಲೆಮಜಲು, ಸಮಾಜ ಸೇವಕರಾದ ಡಾl ರವಿ ಕಕ್ಕೆ ಪದವು, ಸುಬ್ರಹ್ಮಣ್ಯ ಗ್ರಾ. ಪಂ. ಉಪಾಧ್ಯಕ್ಷ ರಾಜೇಶ್ .ಎನ್. ಎಸ್, ಸದಸ್ಯರಾದ ಗಿರೀ ಶ್ ಆಚಾರ್ಯ ಪೈ ಲಾಜೆ, ಶ್ರೀಮತಿ ಭಾರತಿ ದಿನೇಶ್, ಶ್ರೀಮತಿ ಸವಿತಾ ಭಟ್, ಶ್ರೀಮತಿ ಮಲ್ಲಿಕಾ ವೇದಿಕೆಯಲ್ಲಿದ್ದರು .

ಓಂ ಶ್ರೀಸಂಜೀವಿನಿ ಘಟಕದ ಸದಸ್ಯರು, ಕುಕ್ಕೆಶ್ರೀ ಆಟೋ ಚಾಲಕ ಮಾಲಕ ಸಂಘದ ಸದಸ್ಯರು, ಗ್ರಾಮ ಪಂಚಾಯಿತ್ ನ ಸಿಬ್ಬಂದಿ ವರ್ಗ, ಬಿ.ಸಿ‌ಎಂ ಹಾಸ್ಟೆಲ್ ಸಿಬ್ಬಂದಿ ವರ್ಗ, ಹಾಗೂ ವಿದ್ಯಾರ್ಥಿಗಳು, ಘನ ತ್ಯಾಜ್ಯ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ವಿಶೇಷವಾಗಿ ಸುಮಾರು ಏಳು ಕಿಲೋಮೀಟರ್ ನಷ್ಟು ಆನೆಗಳ ಹಾವಳಿ ಇರುವ ಪ್ರದೇಶದಲ್ಲಿ ಕಾಲ್ನಡಿಗೆ ಮೂಲಕ ಸಂಚರಿಸಿ ಸುಬ್ರಹ್ಮಣ್ಯಕ್ಕೆ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಅನ್ನು ಹಲವು ವರ್ಷಗಳಿಂದ ಸರಿಪಡಿಸುತ್ತಿರುವ ಹಿನಿರಂಯ ರಾದಂತಹ ಶಿವಪ್ಪ ನಾಯ್ಕ ನೂಚಿಲ ಪಂಚಾಯತ್ ವತಿಯಿಂದ ಗೌರವಿಸಲಾಯಿತು.

ಪಂಚಾಯತ್ ವತಿಯಿಂದ ಸೂಚನೆ

ಸುಬ್ರಹ್ಮಣ್ಯ ಪೇಟೆ ಮತ್ತಿತರ ಕಡೆ ಗುಟುಕಾ, ಧೂಮಪಾನ ಕ್ಕೆ ಸಂಬಂಧಿಸಿದ ವಸ್ತುಗಳ ಮರಾಟ ನಡೆಯುತಿದ್ದು ಇನ್ನೂ ಇದನ್ನು ನಿಲ್ಲಿಸದಿದ್ದಲ್ಲಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಪಂಚಾಯತ್ ವತಿಯಿಂದ ಸೂಚನೆ ನೀಡಲಾಗಿರುವುದಾಗಿ ತಿಳಿದು ಬಂದಿದೆ.