ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತು ಈಗಾಗಲೇ ಸಮೀಕ್ಷೆ ನಡೆಸಲಾಗುತ್ತಿದ್ದು,
ಸುಳ್ಯ ನಗರಕ್ಕೆ ಸಂಬಂದಿಸಿದಂತೆ ಕೊಳೆಂಜಿಕೋಡಿ, ಕದಿಕ್ಕಾನ, ನೀರಬಿದಿರೆ, ಕೊಯಿಕುಳಿ, ಕಂದಡ್ಕ ಈ ಭಾಗದ ಕೆಲ ಸ್ಥಳಗಳಲ್ಲಿ ನೆಟವರ್ಕ್ ಸಮಸ್ಯೆ ಇರುವುದರಿಂದ ದುಗಲಡ್ನ ಪ್ರೌಡ ಶಾಲೆಯಲ್ಲಿ ದಿನಾಂಕ 03-10-2025 ರಂದು ನಾಳೆ ಕ್ಯಾಂಪ್ ಮಾದರಿಯಲ್ಲಿ ಸಮೀಕ್ಷೆ ನಡೆಸಲಾಗುವುದು.ಸಮೀಕ್ಷೆಯಲ್ಲಿ ಪಾಲ್ಗೊಳ್ಳದೆ ಇರುವ ಕುಟುಂಬದವರು ತಪ್ಪದೆ ಪಾಲ್ಗೊಳ್ಳುವಂತೆ ಈ ಮೂಲಕ ಮನವಿ ಮಾಡಲಾಗಿದೆ.
ಸಮೀಕ್ಷೆಗೆ ಈ ಕೆಳಗಿನ ದಾಖಲೆಗಳನ್ನು ತರುವುದು ಅಗತ್ಯವಾಗಿದೆ.
1.ನಿಮ್ಮ ಮನೆಯಲ್ಲಿ ಸಮೀಕ್ಷೆ ಪ್ರಯುಕ್ತ ಮೆಸ್ಕಾಂ ಇಲಾಖೆಯಿಂದ ಈಗಾಗಲೇ ಅಂಟಿಸಿದ UHID ಸಂಖ್ಯೆಯ ಫೋಟೋ ಅಥವ ಅದನ್ನು ಬರೆದುಕೊಂಡು ತಪ್ಪದೆ ಬರುವುದು.
- ಒಂದು ಕುಟುಂಬದಿಂದ ಯಾರಾದರೂ ಒಬ್ಬರು ಸದಸ್ಯರು ಹಾಜರಾಗುವುದು.















3.ಕುಟುಂಬದ ಪಡಿತರ ಚೀಟಿ ಸದಸ್ಯರುಗಳ ಆಧಾರ್ ಪ್ರತಿ,ಮತದಾರರ ಗುರುತು ಚೀಟಿಯನ್ನು ತರುವುದು.
4.ಮನೆಯಲ್ಲಿ ಯಾರಾದರೂ ವಿಕಲ ಚೇತನರು ಇದ್ದಲ್ಲಿ ಅವರ UDID ಕಡ್ಡಯವಾಗಿ ತರುವುದು.
- OTP ಬರುವಂತಹ ಒಂದು ಮೊಬೈಲ್ ತರಬೇಕು.
- ಕ್ಯಾಂಪ್ ನಲ್ಲಿ ಗಣತಿ ಕಾರ್ಯಕ್ಕೆ ನಿಯೋಜಿಸಿದ ಶಿಕ್ಷಕರು,ನಗರ ಪಂಚಾಯತ್ ಸಿಬ್ಬಂದಿಗಳು ಹಾಜರಿರುತ್ತಾರೆ
ನಗರ ಪಂಚಾಯತ್ ಮುಖ್ಯಾಧಿಕಾರಿ, ಸುಳ್ಯ ಗ್ರಾಮ ಆಡಳಿತಾಧಿಕಾರಿ ಗಳು ಉಪಸ್ಥಿತರಿದ್ದು, ತಹಶೀಲ್ದಾರರ ಮೇಲ್ವಿಚಾರಣೆ ಇರುತ್ತದೆ. ಆದ್ದರಿಂದ ಸಾರ್ವಜನಿಕರು ತಪ್ಪದೆ ದಾಖಲೆಗಳೊಂದಿಗೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ಮೂಲಕ ಕೋರಲಾಗಿದೆ.










