ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪಂಜ ಹೋಬಳಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪಂಜ ಹೋಬಳಿ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಪೂರ್ವಭಾವಿ ಸಮಾಲೋಚನಾ ಸಭೆಯನ್ನು ಅ.1 ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಾಲಯದ ವಠಾರದಲ್ಲಿ ನಡೆಯಿತು.
















ಸಭೆಯ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ವೇದಿಕೆಯಲ್ಲಿ ಪಂಜ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತ್ ನ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ, ಕಾರ್ಯದರ್ಶಿ ವೆಂಕಪ್ಪ ಕೇನಾಜೆ, ಸಹಕಾರಿ ಧುರೀಣ ವೆಂಕಟ್ ದಂಬೆಕೋಡಿ, ಸಾಹಿತಿ ಎ.ಕೆ ಹಿಮಕರ ಉಪಸ್ಥಿತರಿದ್ದರು.

ಸಭೆಯಲ್ಲಿ ಯೋಗಿಶ್ ಹೊಸೊಳಿಕೆ, ಪ್ರಭಾಕರ ಕಿರಿಭಾಗ, ರಾಮಚಂದ್ರ ಪಳಂಗಾಯ, ಚಿನಪ್ಪ ಮುಚ್ಚಾರ, ಬಿಟ್ಟಿ. ಬಿ. ನೆಡುನೀಲಂ, ಗಂಗಾಧರ ಗೌಡ ದಂಬೆಕೋಡಿ, ರಮೇಶ್. ಪಿ, ಕುಶಾಲಪ್ಪ. ತುಂಬತ್ತಾಜೆ, ಗೋಪಾಲಕೃಷ್ಣ ಪಿ. ಎಂ, ಅಪೂರ್ವ. ಕೆ. ಟಿ, ಕೇಶವ ಹೊಸೊಳಿಕೆ, ದಿನೇಶ್ ಹಾಲೆ ಜಮಲು, ಮೋಹನ. ಪಿ, ವೆಂಕಟ್ ವಳಲಂಬೆ, ವಿನ್ಯಾಸ್. ಕೊಚ್ಚಿ, ಚಂದ್ರಶೇಖರ ತಳೂರು, ಲೋಕೇಶ್ವರ. ಡಿ. ಆರ್ ಮತ್ತಿತರರು ಉಪಸ್ಥಿತರಿದ್ದರು.










