ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಮುಕ್ತಾಯ – ಧಾರ್ಮಿಕ ಸಭಾ ಕಾರ್ಯಕ್ರಮ

0

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸೆ. 21 ರಂದು ಆರಂಭವಾದ ನವರಾತ್ರಿ ಉತ್ಸವಕ್ಕೆ ಅ. 2 ರಂದು ತೆರೆ ಕಂಡಿತು.

ಎಲ್ಲಾ ದಿನಗಳಲ್ಲೂ ಭಜನಾ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ ವಿಜ್ರಂಬಣೆಯಿಂದ ನಡೆಯಿತು.

ಅ.1 ರಂದು ಧಾರ್ಮಿಕ ಸಭೆ ನಡೆಯಿತು. ಎಣ್ಮುರು ಕೋಟಿ ಚೆನ್ನಯ್ಯ ಗರಡಿಯ ಅನುವಂಶಿಕ ಆಡಳಿತದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿಯವರು ದೀಪ ಪ್ರಜ್ವಲನೆ ಮಾಡಿ ಮಾತನಾಡಿ, “ತಾನು ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿರುವ ಸಂದರ್ಭದಲ್ಲಿ ದೇವಸ್ಥಾನ ಕಟ್ಟುವ ಕಷ್ಟ ಮತ್ತು ಊರವರ ಸ್ಪಂದನೆ ಹಾಗೂ ದೇವಾಲಯ ನಿರ್ಮಾಣದ ಬಗ್ಗೆ ನಂತರದ ಸಮಿತಿಯವರು ಅಭಿವೃದ್ಧಿಪಡಿಸಿದ ಸುಂದರವಾದ ದೇವಸ್ಥಾನದ” ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಲಕ್ಷ್ಮೀಶ ಗಬ್ಲಡ್ಕ ಧಾರ್ಮಿಕ ಉಪನ್ಯಾಸ ನೀಡಿದರು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್.ಜಿ ಲೋಕನಾಥ ರೈ ಪಟ್ಟೆ ಅಧ್ಯಕ್ಷತೆ ವಹಿಸಿ ಮಾತನಾಡಿ, “ಸಮಿತಿ ಮತ್ತು ಅಧ್ಯಕ್ಷರು ನಿಮಿತ್ತ,, ದೇವಳದ ಸೇವಾ ಸಮಿತಿ ಹಾಗೂ ಸಂಘಟಕರ ನಿರಂತರ ಬಾಗವಹಿಸುವಿಕೆ, ಶ್ರಮ ಸೇವೆ, ಭಕ್ತರ ಸೇವೆ, ಕೂಡುಕಟ್ಟು ಸದಸ್ಯರ ಇರುವಿಕೆಯಿಂದ ಕಾರ್ಯಕ್ರಮ ಯಶಸ್ವಿಗೆ ಕಾರಣವಾಯಿತು” ಎಂದರು.

ಪಂಜ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಮಾಯಿಲಪ್ಪ ಗೌಡ ಎಣ್ಮುರು, ರಮೇಶ್ ಕೋಟೆ, ವ್ಯ. ಸಮಿತಿ ಮಾಜಿ ಅಧ್ಯಕ್ಷ ಅಕ್ಷಯ ಅಳ್ವ, ವ್ಯ. ಸಮಿತಿ ಸದಸ್ಯರಾದ ಲೋಕೇಶ್ ಕೇರ್ಪಡ, ವಾಚಣ್ಣ ಗೌಡ ಹುದೇರಿ, ಗುಣವತಿ ನಾವೂರು, ವೇಣುಗೋಪಾಲ ರೈ ಕಲ್ಲೇರಿ, ಪ್ರಮೋದ್ ಕುಮಾರ್ ರೈ ಕಟ್ಟ ಹೊಸಜಾಲು, ಬಿಜಿಲ ಅಲೆಕ್ಕಾಡಿ, ಕಸ್ತೂರಿ ಚಂದ್ರಶೇಖರ್ ವೇದಿಕೆಯಲ್ಲಿದ್ದರು.

ಸೇವಾ ಸಮಿತಿಯ ಶಿವಾನಂದ ಬೊಳ್ಕಜೆ, ಧರ್ಮಪಾಲ ಅನ್ನೋವು, ಸಾಯಿಪ್ರಸಾದ್ ಬೊಳ್ಕಜೆ, ಸುಂದರ ಗೌಡ ಆರೆಂಬಿ, ನಳಿನಿ ಚೆನ್ನಪ್ಪ ಗೌಡ ಬಾಲಕೃಷ್ಣ ನಾಗನಕಜೆ ಕೋಟಾರ, ಪ್ರಕಾಶ್ ರೈ ಎಣ್ಮುರು, ಪಿಲಿ ಕಿಟ್ಟುರವರನ್ನು ಗುರುತಿಸಿ ಗೌರವ ನೀಡಲಾಯಿತು.

ಸುಜಿತ್ ರೈ ಪಟ್ಟೆ ಕಾರ್ಯಕ್ರಮ ನಿರೂಪಿಸಿದರು. ದೇವಳದ ಭಜನಾ ಸಮಿತಿ ಸದಸ್ಯರಾದ ಕು ಹಿತ, ಕು ಚರಿಷ್ಮ, ಕು ಹಿತ ಪ್ರಾರ್ಥಿಸಿದರು, ಸದಸ್ಯ ಲೋಕೇಶ್ ಕೇರ್ಪಡ ವಂದಿಸಿದರು.

ಅ.2 ರಂದು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನಾಗೇಶ್ ತಂತ್ರಿಗಳ ಮಾರ್ಗದರ್ಶನದಲ್ಲಿ ಬೆಳಿಗ್ಗೆ ಗಣ ಹೋಮ, ಶ್ರೀದೇವರಿಗೆ ಸೀಯಾಳ ಅಭಿಷೇಕ, ಮಕ್ಕಳಿಗೆ ಅಕ್ಷರಾಭ್ಯಾಸ, ಮದ್ಯಾಹ್ನ ಮಹಾಸಂಪ್ರೋಕ್ಷಣೆ, ಮಹಾ ಅನ್ನದಾನ ನಡೆಯಿತು.

ವಿಶೇಷತೆ

ನಿರಂತರ 35 ವರ್ಷದಿಂದ ಹುಲಿ ವೇಷ ಹಾಕುತಿದ್ದ ಪಿಲಿ ಕಿಟ್ಟು ನೂಜಾಡಿ ವಿಶೇಷವಾಗಿ ಊರೂರು ತಿರುಗಾಡಿ ಕ್ಷೇತ್ರದ ಸ್ಮರಣೆ ಮಾಡುವಂತೆ ಮಾಡಿದರು.

ಪ್ರತಿದಿನ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೂರೆ ಗೊಂಡಿತು.

ಪ್ರಧಾನ ಅರ್ಚಕ ಶ್ರೀಹರಿ ಕುಂಜೂರಾಯ, ವೇದಮೂರ್ತಿ ಗಳಾದ ಪ್ರಶಾಂತ್ ಪರ್ಲತ್ತಾಯ, ಕೃಷ್ಣಪ್ರಸಾದ ಪರ್ಲತ್ತಾಯ, ಚಿದಾನಂದ ಉಪಾಧ್ಯಯ, ನಾಗರಾಜ್ ರಾವ್ ಆಲಾಜೆ, ಶಿವರಾಮ ಭಟ್ ಕಲ್ಪಡರವರು ವೈಧಿಕ ಕಾರ್ಯಕ್ರಮ ನಡೆಸಿಕೊಟ್ಟು ಉತ್ಸವ ಯಶಸ್ವಿಗೊಳಿಸಿದರು

ವರದಿ : ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ