ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ – ಜಲಸ್ತಂಭನ
ಮೆರುಗು ನೀಡಿದ ಹುಲಿವೇಷ ಕುಣಿತ, ಗೊಂಬೆ ಬಳಗ,ಕುಣಿತ ಭಜನೆ
ಭಕ್ತಾದಿಗಳನ್ನು ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು

ಶಾರದೋತ್ಸವ ಸಮಿತಿ ಬೆಳ್ಳಾರೆ ವತಿಯಿಂದ ಶ್ರೀ ಶಾರದೋತ್ಸವವು ಅ.02 ರಂದು ಭಕ್ತಿ,ಸಂಭ್ರಮದಿಂದ ನಡೆಯಿತು.
ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮಗಳು ನಡೆದವು.
ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ ನಡೆಯಿತು.

ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಸಂಜೆ ಜಗದೀಶ್ ಆಚಾರ್ಯ ಪುತ್ತೂರು ಬಳಗದಿಂದ ಸಂಗೀತ ಗಾನ ಸಂಭ್ರಮ ನಡೆಯಿತು.
ಸಾಂಸ್ಜೃತಿಕ ಕಾರ್ಯಕ್ರಮದಲ್ಲಿ ಕಿಕ್ಕಿರಿದು ಜನರು ಸೇರಿದ್ದು ಭಕ್ತಾದಿಗಳ ಮನಸೂರೆಗೊಳಿಸಿತು.









ಸನ್ಮಾನ
ಹಲವು ವರ್ಷದಿಂದ ಶ್ರೀ ಶಾರದಾ ದೇವಿಯ ಮೂರ್ತಿಯನ್ನು ರಚನೆ ಮಾಡುತ್ತಿರುವ ಐತ್ತ ಪಾಟಾಜೆಯವರನ್ನು ಶಾಲು ಹೊದಿಸಿ,ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಜಗದೀಶ್ ಆಚಾರ್ಯ ಮತ್ತು ಬಳಗದವರನ್ನು ಗೌರವಿಸಲಾಯಿತು.

ರಾತ್ರಿ ನಡೆದ ಶೋಭಾಯಾತ್ರೆಯಲ್ಲಿ ಫ್ರೆಂಡ್ಸ್ ಟೈಗರ್ ಬೆಳ್ಳಾರೆ ಇವರಿಂದ ಹುಲಿವೇಷ ಕುಣಿತ ನಡೆಯಿತು.
ಲಕ್ಷ್ಮಣ ಆಚಾರ್ಯ ಎಡಮಂಗಲ ಶ್ರೀ ಗೋಪಾಲಕೃಷ್ಣ ಗೊಂಬೆಬಳಗದಿಂದ ಗೊಂಬೆ ಕುಣಿತ ನಡೆಯಿತು.
ಸ್ನೇಹಾಂಜಲಿ ಕುಣಿತ ಭಜನಾ ತಂಡ ಬೆಳ್ಳಾರೆ ಇವರಿಂದ ವಿವಿಧ ಆಕರ್ಷಣೀಯ ನೃತ್ಯದೊಂದಿಗೆ ಶ್ರೀ ದೇವರ ಶೋಭಾಯಾತ್ರೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಉಮಿಕ್ಕಳ,ಸಂಚಾಲಕ ಸದಾಶಿವ ಮಣಿಯಾಣಿ ಪಡ್ಪು,ಕೋಶಾಧಿಕಾರಿ ಗಂಗಾಧರ ಪಾಟಾಳಿ ಪಡ್ಪು,ಕಾರ್ಯದರ್ಶಿ ಪ್ರಸಾದ್ ಆಚಾರ್ಯ,ನಿಕಟಪೂರ್ವ ಪೂರ್ವ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ಮತ್ತು ಸಮಿತಿಯ ಸರ್ವ ಸದಸ್ಯರು ಮತ್ತು ಸಾವಿರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.










