ಆಲೆಟ್ಟಿ ಸದಾಶಿವ ದೇವಳದಲ್ಲಿ ಅಜ್ಜಾವರ ಮಂಡಲದ ಆರ್. ಎಸ್. ಎಸ್ ನ ವಿಜಯ ದಶಮಿ ಉತ್ಸವ

0

ಸಂಘದ ಶತಾಬ್ದಿಯಲ್ಲಿ ಗಣವೇಷಧಾರಿಗಳಾಗಿ ಪಾಲ್ಗೊಂಡ ನೂರಾರು ಕಾರ್ಯಕರ್ತರು

ಸಂಘದ ಶತಾಬ್ದಿ ಹೊಸ್ತಿಲಲ್ಲಿ ಹಿಂದೂ ಸಮಾಜದಲ್ಲಿ
ಪಂಚ ಪರಿವರ್ತನೆಯು ಅಭಿಯಾನದರೂಪದಲ್ಲಾಗಲಿ- ಚರಣ್ ರಾಜ್

ಸಂಘ ಶತಾಬ್ದಿ ಕಾರ್ಯಕ್ರಮ ದ ಮೂಲಕ ಹಿಂದೂ ಸಮಾಜದ ಹತ್ತಿರ ಸಂಘ ಹೋಗಬೇಕು. ಸಮಾಜದ ಪ್ರತಿಯೊಬ್ಬನು ಸಂಘದ ಶಕ್ತಿಯಾಗಬೇಕು.


ಡಾ. ಹೆಡಗೆವಾರ್ ರವರು ಹಿಂದೂ ಸಮಾಜದ ಮೇಲಾಗುವ ಮುಂದಿನ ಅನಾಹುತದ ಬಗ್ಗೆ ಆಳವಾದ ಚಿಂತನೆ ನಡೆಸಿ1925 ರಲ್ಲಿ ಸಂಘ ಸ್ಥಾಪಿಸಿ ಶಾಖೆಯನ್ನು ಪ್ರಾರಂಭಿಸಿದರು. ಸಂಘವು ತಿರಸ್ಕಾರ, ವಿರೋಧ, ಸ್ವೀಕಾರ ಎಂಬ ಮೂರು ಮಜಲುಗಳನ್ನು ದಾಟಿ ಬಂದು ಬೆಳೆದು ನಿಂತಿದೆ ಎಂದು ಪುತ್ತೂರು ಜಿಲ್ಲಾ ಪ್ರಚಾರ ಪ್ರಮುಖ್ ಚರಣ್ ರಾಜ್ ಅರಿಯಡ್ಕ ರವರು ಬೌದ್ದಿಕ್ ನಡೆಸಿದರು.

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಸಭಾಂಗಣ ದಲ್ಲಿ ಅ. 2 ರಂದು ನಡೆದ ಅಜ್ಜಾವರ ಮಂಡಲದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಜಯದಶಮಿ ಉತ್ಸವದ ಹಾಗೂ ಸಂಘ ಶತಾಬ್ದಿ ಕಾರ್ಯಕ್ರಮದಲ್ಲಿ ಹೇಳಿದರು.

ಹಿಂದೆ ಹಿಂದೂ ಎಂದು ಹೇಳಿಕೊಳ್ಳಲು ನಾಚಿಕೆ ಪಡುತ್ತಿದ್ದವರು ಇಂದು ನಾನೊಬ್ಬ ಹಿಂದೂ ಎಂದು ಎದೆ ತಟ್ಟಿ ಹೇಳಬಲ್ಲ ಸಾಮರ್ಥ್ಯವನ್ನು ಸಂಘ ನೀಡಿದೆ.
100 ರ ಶತಾಬ್ದಿಯ ಸಂದರ್ಭದಲ್ಲಿ ಶತಮಾನೋತ್ಸವ ಆಚರಿಸುವ ಬದಲಾಗಿ ಪಂಚ ಪರಿವರ್ತನೆಯಪರ್ಯವರಣ, ಸಾಮರಸ್ಯ, ಕುಟುಂಬ ಪ್ರಭೋದನೆ, ಶಿಷ್ಟಚ್ಚಾರ, ಸ್ವದೇಶಿ ವಿಚಾರದ ಬಗ್ಗೆ ಮನೆ
ಮನೆಗೆಸಂಪರ್ಕಿಸಿಅಭಿಯಾನನಡೆಸಬೇಕು.ಸಂಘದ ಶತಾಬ್ದಿ ಅಂಗವಾಗಿ ವಾರ್ಷಿಕವಾಗಿ 7 ಕಾರ್ಯಕ್ರಮ ನಡೆಸಿ ಕೊನೆಯದಾಗಿ ಸಂಘದ ನಿತ್ಯ ಶಾಖೆ ನಡೆಸಿಕೊಂಡು ಬರುವಂತಾಗಬೇಕು.ನಿತ್ಯ ಶಾಖೆ ನಡೆಸಿಕೊಂಡು ಬಂದಲ್ಲಿ ನಮ್ಮ ರಾಷ್ಟ್ರ ಪರಮ ವೈಭವವಾಗುವುದು ಎಂದು ಗುರೂಜಿ ಯವರು ಹೇಳಿದ್ದಾರೆ ಎಂಬ ಸಂದೇಶ ನೀಡಿದರು.

ನಿವೃತ್ತ ಎ. ಎಸ್. ಐ ಸೀತಾರಾಮ ಗೌಡ ಕುಡೆಕಲ್ಲು ರವರು ಅತಿಥಿ ಯಾಗಿ ಭಾಗವಹಿಸಿ “ರಾಷ್ಟ್ರ ದಲ್ಲಿ ಹಿಂದೂಸಮಾಜಸದೃಢವಾಗಿ ಬೇರೂರಲು ಆರ್. ಎಸ್. ಎಸ್ಮುಖ್ಯಕಾರಣವಾಗಿರುವುದು. ಆಲೆಟ್ಟಿ ಅಜ್ಜಾವರ ಪ್ರಾಂತ್ಯದಲ್ಲಿ ಸಂಘದ ಶಕ್ತಿ ಬೆಳೆದು ನಿಂತಿರುವುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದು ಹೇಳಿದರು.
ಆರಂಭದಲ್ಲಿ ಸಂಘದ
ವೈಯಕ್ತಿಕ ಗೀತೆ, ಅಮೃತ ವಚನಪ್ರಸ್ತುತಪಡಿಸಲಾಯಿತು. ಸಂಘದ ಶಾಖೆಯ ಸದಸ್ಯರಿಂದ ಕವಾಯತು ಪ್ರದರ್ಶನ ಹಾಗೂ ಆಟೋಟ ವ್ಯಾಯಾಮದ ಚಟುವಟಿಕೆಗಳನ್ನು ನಡೆಸಲಾಯಿತು. ಆಗಮಿಸಿದ ಎಲ್ಲಾ ಹಿಂದೂ ಬಾಂಧವರಿಗೆ ಮುತ್ತೖದೆ ಮಹಿಳೆಯರು ತಿಲಕವಿರಿಸಿ ಸ್ವಾಗತಿಸಿದರು.ಎಲ್ಲರೂ ಭಾರತಮಾತೆಯಭಾವಚಿತ್ರಕ್ಕೆಪುಷ್ಪಾರ್ಚನೆಗೈದು ವಂದಿಸಿದರು.
ಆಗಮಿಸಿದ ಎಲ್ಲರಿಗೂ
ಪಾನಕ ಮತ್ತು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಿ ಸಂಘದ “ನಮಸ್ತೇ ಸದಾ ವತ್ಸಲೆ” ಗೀತೆಯೊಂದಿಗೆ ಉತ್ಸವು ಮುಕ್ತಾಯಗೊಂಡಿತು.
ಬಹುತೇಕ ಸಂಘದ ಹಿರಿಯ, ಕಿರಿಯ ಕಾರ್ಯಕರ್ತರು
ಗಣವೇಷಧಾರಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಾತೆಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದರು.
ವಾಹನ ಪಾರ್ಕಿಂಗ್ ವ್ಯವಸ್ಥೆ ಆಲೆಟ್ಟಿಯ ವಿಷ್ಣುಮೂರ್ತಿ ಒತ್ತೆಕೋಲ ಮಜಲಿನಲ್ಲಿ ಮಾಡಲಾಗಿತ್ತು. ಕಾರ್ಯಕ್ರಮದ
ಅಚ್ಚುಕಟ್ಟಾದ ಎಲ್ಲಾ ವ್ಯವಸ್ಥೆಯನ್ನು ಸಂಘದ ಕಾರ್ಯಕರ್ತರೇ ನಿರ್ವಹಿಸಿರುವುದು ವಿಶೇಷವಾಗಿತ್ತು.