ಸುಳ್ಯ ಲಯನ್ಸ್ ‌ಕ್ಲಬ್ ಗೆ ಪ್ರಾಂತೀಯ ಅಧ್ಯಕ್ಷರ ಭೇಟಿ: ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಸನ್ಮಾನ

0

ಸುಳ್ಯ ಲಯನ್ಸ್ ಕ್ಲಬ್ಬಿಗೆ ಪ್ರಾಂತೀಯ ಅಧ್ಯಕ್ಷರಾದ ಲ.ರಂಗಯ್ಯ ಶೆಟ್ಟಿಗಾರ್ ರವರ ಅಧಿಕೃತ ಭೇಟಿ ಸೆ.27ರಂದು ನಡೆಯಿತು.

ಈ ಕಾರ್ಯಕ್ರಮಕ್ಕೆ ಸಂಪಾಜೆ, ಗುತ್ತಿಗಾರು, ಪಂಜ, ಸುಬ್ರಹ್ಮಣ್ಯ ಮತ್ತು ಕಡಬ ಕ್ಲಬ್ಬಿನಿಂದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.
ಸಭಾಧ್ಯಕ್ಷತೆಯನ್ನು ಸುಳ್ಯ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ವಹಿಸಿದ್ದರು.


ಸಭಾ ವೇದಿಕೆಯಲ್ಲಿ ಪ್ರಾಂತೀಯ ರಾಯಭಾರಿ ಲಯನ್ ಜಯರಾಮ್ ದೇರಪ್ಪಜ್ಜನಮನೆ, ವಲಯ ಎರಡರ ವಲಯ್ಯಾಧ್ಯಕ್ಷ ಲಯನ್ ಚಂದ್ರಶೇಖರ ನಂಜೆ, ಐಪಿಪಿ ಲಯನ್ ರಾಮಕೃಷ್ಣ ರೈ, ಕಾರ್ಯದರ್ಶಿ ಮಲ್ಲಿಕಾರ್ಜುನ ಪ್ರಸಾದ್, ಕೋಶಾಧಿಕಾರಿ ಜತ್ತಪ ರೈ ಮತ್ತು ಪ್ರಾಂತೀಯ ಅಧ್ಯಕ್ಷರ ಧರ್ಮಪತ್ನಿ, ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ಬಿನ ಅಧ್ಯಕ್ಷೆ ಲ. ವಿಮಲಾ ರಂಗಯ್ಯ ಭಾಗವಹಿಸಿದ್ದರು.


ಜಿಲ್ಲಾ ಪ್ರಶಸ್ತಿ ಪಡೆದ ಶಿಕ್ಷಕರಾದ ಶ್ರೀಧರ ಗೌಡ ಕೆ, ಮೋಹನ್ ಎಣ್ಮೂರು, ಲಲಿತ ಕುಮಾರಿ ಯವರನ್ನು ಗೌರವಿಸಲಾಯಿತು ಮತ್ತು ಸೇವಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.


ಶಿಕ್ಷಕ ವೃತ್ತಿಯನ್ನು ಮಾಡಿ ನಿವೃತ್ತರಾದ ಮತ್ತು ಸೇವೆಯನ್ನು ಸಲ್ಲಿಸುತ್ತಿರುವ ಶಿಕ್ಷಕ ಶಿಕ್ಷಕಿ ಸದಸ್ಯರುಗಳಿಗೆ ಗೌರವ ಸಲ್ಲಿಸಲಾಯಿತು
ವಾರ್ಷಿಕ ಬುಲೆಟಿನ್ ಸೇವಾ ದೀಪ ವನ್ನು ಪ್ರಾಂತೀಯ ಅಧ್ಯಕ್ಷರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮವನ್ನು ಲಯನ್ ವೀಣಾ ಪ್ರಸಾದ್ ನಡೆಸಿಕೊಟ್ಟರು