ಕಟ್ಟಡ ನಿರ್ಮಾಣ ಸಮಿತಿ ರಚನೆ: ಗೌರವಾಧ್ಯಕ್ಷ- ಗುರುಪ್ರಸಾದ್ ರೈ ಮೊರಂಗಲ್ಲು, ಕಾರ್ಯಾಧ್ಯಕ್ಷ -ಜಯಪ್ರಕಾಶ್ ಕುಂಚಡ್ಕ, ಅಧ್ಯಕ್ಷ – ರಾಧಾಕೃಷ್ಣ ರೈ ಅಲೆಟ್ಟಿ,ಪ್ರ. ಕಾರ್ಯದರ್ಶಿ – ಕೃಪಾಶಂಕರ ಟಿ.
ಅಲೆಟ್ಟಿ ಯುವಕ ಮಂಡಲದ ನೂತನ ಕಟ್ಟಡ ನಿರ್ಮಾಣದ ಕುರಿತು ಪೂರ್ವ ಭಾವಿ ಸಮಾಲೋಚನಾ ಸಭೆ ಮತ್ತು ಕಟ್ಟಡ ನಿರ್ಮಾಣ ಸಮಿತಿಯ ರಚನೆಯು ಅ. 5 ರಂದು ಅಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾ ಭವನದಲ್ಲಿ ನಡೆಯಿತು.
ಯುವಕ ಮಂಡಲದ ಅಧ್ಯಕ್ಷ ಜಯಪ್ರಕಾಶ್ ಕುಡೆಕಲ್ಲು ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಗೌರವಾಧ್ಯಕ್ಷ ದಿನೇಶ್ ಅಲೆಟ್ಟಿ, ಶಿವಪ್ರಸಾದ್ ಅಲೆಟ್ಟಿ, ಕೋಶಾಧಿಕಾರಿ ಅಶ್ವಥ್ ಅಲೆಟ್ಟಿ,ಜತೆ ಕಾರ್ಯದರ್ಶಿ ವಿನೀತ್ ಕುಡೆಕಲ್ಲು ಉಪಸ್ಥಿತರಿದ್ದರು.









ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಶಿವಪ್ರಸಾದ್ ಅಲೆಟ್ಟಿ ಯವರು ಪ್ರಾಸ್ತಾವಿಕ ಮಾತನಾಡಿ ಗ್ರಾಮದ ಯುವಕ, ಯುವತಿಯರ ಪ್ರತಿಭೆಗಳ ಅನಾವರಣಕ್ಕಾಗಿ
ಹಿರಿಯರು ಹುಟ್ಟು ಹಾಕಿದ ಯುವಕ ಮಂಡಲಕ್ಕೆ ಅಂದಿನ ಕಾಲಕ್ಕೆ ಅನುಗುಣವಾಗಿ ಸುಂದರ ವಾದ ಕಟ್ಟಡವನ್ನು ಹಿರಿಯರು ಶ್ರಮ ವಹಿಸಿ ನಿರ್ಮಿಸಿದ್ದರು.
ಕಾಲ ಕ್ರಮೇಣ ಕಟ್ಟಡದ ಆಯುಷ್ಯ ಮುಗಿದು ಶಿಥಿಲಗೊಂಡು ಬೀಳುವ ಹಂತಕ್ಕೆ ತಲುಪಿತು. ಇದನ್ನು ಮನಗಂಡು ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಬೇಕೆಂಬ ಮಹತ್ವಕಾಂಕ್ಷೆ ಯೋಜನೆಗೆ ಯುವಕರು ಮುಂದಾಗಿದ್ದು ಗ್ರಾಮದ ಎಲ್ಲಾಭಾಗಗಳಿಂದ ಮುಖಂಡರನ್ನು ಸೇರಿಸಿಕೊಂಡು ಸಮಿತಿ ರಚಿಸುವ ಉದ್ದೇಶದಿಂದ ಪೂರ್ವಭಾವಿ ಸಭೆ
ಕರೆಯಲಾಗಿದೆ ಎಂದು ವಿವರ ತಿಳಿಸಿದರು.
ಬಳಿಕನೂತನ ಕಟ್ಟಡ ನಿರ್ಮಾಣ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಗುರುಪ್ರಸಾದ್ ರೈ ಮೊರಂಗಲ್ಲು, ಕಾರ್ಯಾಧ್ಯಕ್ಷರಾಗಿ ಜಯಪ್ರಕಾಶ್ ಕುಂಚಡ್ಕ, ಅಧ್ಯಕ್ಷರಾಗಿ ರಾಧಾಕೃಷ್ಣ ರೈ ಅಲೆಟ್ಟಿ, ಗೌರವ ಕಾರ್ಯದರ್ಶಿ ಸುಧಾಮ ಅಲೆಟ್ಟಿ, ಪ್ರಧಾನ ಕಾರ್ಯದರ್ಶಿ ಕೃಪಾಶಂಕರ ತುದಿಯಡ್ಕ, ಕೋಶಾಧಿಕಾರಿ ತೀರ್ಥಕುಮಾರ್ ಕುಂಚಡ್ಕ,ಜತೆ ಕಾರ್ಯದರ್ಶಿ ರಾಮಚಂದ್ರ ಅಲೆಟ್ಟಿ, ಸಂಚಾಲಕ ಶಿವಪ್ರಸಾದ್ ಅಲೆಟ್ಟಿ ಹಾಗೂ ಗ್ರಾಮದ ಪ್ರಮುಖರನ್ನು ಗೌರವ ಸಲಹೆಗಾರರಾಗಿ ಮತ್ತು ನಿರ್ದೇಶಕರುಗಳನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಮುಂದಿನ ಸಭೆಯ ದಿನ ನಿಗದಿ ಪಡಿಸಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸುವುದು. ಅದೇ ದಿನ ಮನವಿ ಪತ್ರ ಬಿಡುಗಡೆ ಮಾಡಿ ಸಂಗ್ರಹದ ಕಾರ್ಯ ಆರಂಭಿಸುವುದಾಗಿ ಸಭೆಯಲ್ಲಿತೀರ್ಮಾನಿಸಲಾಯಿತು.
ಯುವಕ ಮಂಡಲದ ಅಧ್ಯಕ್ಷ ಜಯಪ್ರಕಾಶ್ ಕುಡೆಕಲ್ಲು ಸ್ವಾಗತಿಸಿ, ಪ್ರವೀಣ್ ಅಲೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಯುವಕ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.
ಗ್ರಾಮದ ನಾಗರಿಕರು ಸಭೆಯಲ್ಲಿ ಭಾಗವಹಿಸಿ ಸಲಹೆ ನೀಡಿದರು.










