ಸುಳ್ಯ ಯುವಜನ ಸಂಯುಕ್ತ ಮಂಡಳಿ ನೇತೃತ್ವ
ಸುಳ್ಯದ ಯುವಜನ ಸಂಯುಕ್ತ ಮಂಡಳಿ ಹಾಗೂ ತಾಲೂಕಿನ 47 ಯುವಕ ಹಾಗೂ ಯುವತಿ ಮಂಡಲಗಳ ಆಶ್ರಯದಲ್ಲಿ ಪಂಚಸಪ್ತತಿ ಸ್ವಚ್ಚತಾ ಅಭಿಯಾನಕ್ಕೆ ಅ.10ರಂದು ಚಾಲನೆ ದೊರೆಯಲಿದೆ.















ಪಂಚಸಪ್ತತಿ 2025 ಸ್ವಚ್ಛ ಅಭಿಯಾನಕ್ಕೆ ಈಗಾಗಲೇ ಸುಮಾರು 47 ಯುವಕ ಯುವತಿ ಮಂಡಲಗಳು ನೋಂದಾವಣೆ ಮಾಡಿಕೊಂಡಿದ್ದು, ಅಭಿಯಾನದ ಪ್ರಾರಂಭ ದಿನವಾದ ಅ.10ರಂದು ನೋಂದಾವಣೆಯಾದ 47 ಯುವಕ ಯುವತಿ ಮಂಡಲಗಳು ಕೂಡ ಏಕ ದಿನದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದೆ ಎಂದು ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಹಾಗೂ ಕಾರ್ಯದರ್ಶಿ ಮುರಳಿ ನಳಿಯಾರು ತಿಳಿಸಿದ್ದಾರೆ.










