ಇತ್ತೀಚಿಗೆ ನಿಧನರಾದ ಕನಕಮಜಲು ಗ್ರಾಮದ ದಿ.ರತ್ನಾವತಿ ಕಜೆಗದ್ದೆಯವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆ ಅ. 9 ರಂದು ಕಜೆಗದ್ದೆ ಮನೆಯಲ್ಲಿ ನಡೆಯಿತು.
















ನಿವೃತ್ತ ಶಿಕ್ಷಕ ಸೀತಾರಾಮ ಮಾಸ್ಟರ್ ಬುಡ್ಲೆಗುತ್ತುರವರು ಶ್ರೀಮತಿ ರತ್ನಾವತಿಯವರ ಬಗ್ಗೆ ಮಾತನಾಡಿ ನುಡಿ ನಮನ ಸಲ್ಲಿಸಿದರು.
ಹಿರಿಯರಾದ ಶ್ರೀಮತಿ ಗಂಗಮ್ಮ ಕಜೆಗದ್ದೆ, ಚಂದ್ರಶೇಖರ ಕುದ್ಕುಳಿ, ಶ್ರೀಮತಿ ರತ್ನಾವತಿ ಕಜೆಗದ್ದೆಯವರ ಪುತ್ರ ರಮೇಶ್ ಕಜೆಗದ್ದೆ, ಪುತ್ರಿ ಶ್ರೀಮತಿ ಜಯಂತಿ ಪದ್ಮನಾಭ ಆಲಂಕಲ್ಯ, ಸೊಸೆ ಶ್ರೀಮತಿ ಕಾವ್ಯ ರಮೇಶ್, ಮೊಮ್ಮಕ್ಕಳು ಕುಟುಂಬಸ್ಥರು ಉಪಸ್ಥಿತರಿದ್ದರು. ಸುರೇಶ್ ಕುದ್ಕುಳಿ ಕಾರ್ಯಕ್ರಮ ನಿರ್ವಹಿಸಿದರು.










