ಸಮಸ್ತ ಸೆಂಚುನರಿ ಪ್ರಯುಕ್ತ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ರಾಜ್ಯ ಸಮಿತಿ ಸಾಧಕ ಮುಅಲ್ಲಿಮರನ್ನು ಗುರುತಿಸಿ ನೀಡುವ ಮುಅಲ್ಲಿಂ ಪ್ರಶಸ್ತಿ ಗೆ ಸುಳ್ಯ ರೇಂಜಿನ ಬುಸ್ತಾನುಲ್ ಉಲೂಂ ಮದ್ರಸ ಸದರ್ ಮುಅಲ್ಲಿಂ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಆಯ್ಕೆಯಾಗಿರುತ್ತಾರೆ.















ಅಕ 14 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಮುಅಲ್ಲಿಂ ಜಿಲ್ಲಾ ಸಮ್ಮೇಳನದಲ್ಲಿ ಎಸ್ ಜೆ ಎಂ ಕೇಂದ್ರ ಸಮಿತಿ ಅಧ್ಯಕ್ಷರಾದ ಅಮೀನು ಶ್ಶರೀಅಃ ಅಸ್ಸೆಯ್ಯಿದ್ ಅಲೀ ಬಾಫಖಿ ತಂಙಳ್ ರವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಒಂದೇ ಮದ್ರಸದಲ್ಲಿ ಸುದೀರ್ಘಕಾಲ ಅಧ್ಯಾಪಕರಾಗಿ ಸೇವೆಯೊಂದಿಗೆ ಕೇಂದ್ರ ಸಮಿತಿ ಆಯೋಜಿಸಿದ ಹತ್ತಾರು ತರಬೇತಿಗಳಲ್ಲಿ ಭಾಗವಹಿಸಿ ಸರ್ಟ್ ಫಿಕೇಟ್ ಪಡೆದ,ಹದಿನೈದು ವರ್ಷಗಳ ಹಿಂದೆಯೇ ರಾಜ್ಯ ಮುಅಲ್ಲಿಂ ಸರ್ವಿಸ್ ಕಾರ್ಡ್ ಪಡೆದ,ರಾಜ್ಯ ಸಮಿತಿಯ ಯೋಜನೆಗಳಲ್ಲಿ ಪಾಲ್ಗೊಂಡ,ಅಧ್ಯಾಪಕ ಒಕ್ಕೂಟದಲ್ಲಿ ಸಕ್ರೀಯತೆ ಮುಂತಾದ ಹಲವು ಮಾನದಂಡಗಳುಳ್ಳ ಅಧ್ಯಾಪಕರಿಗೆ ನೀಡುವ ಗೌರವಾರ್ಪಣೆಯಾಗಿದೆ ಈ ಮುಅಲ್ಲಿಂ ಪ್ರಶಸ್ತಿ
ಪ್ರಸ್ತುತ ಇವರು ಪೆರಾಜೆಯ ಮುಹಿಯ್ಯದ್ದೀನ್ ಜುಮಾ ಮಸ್ಜಿದ್ ನ ದರ್ಸಿನಲ್ಲಿ ವಿಧ್ಯೆ ಅಭ್ಯಸಿಸುವ ಜೊತೆಯಲ್ಲೇ ಅಲ್ಲಿಯ ಖುವ್ವತುಲ್ ಇಸ್ಲಾಂ ಮದ್ರಸ ದಲ್ಲಿ ನಾಲ್ಕು ವರ್ಷಗಳು ಅಧ್ಯಾಪಕರಾಗಿ ಸೇವೆ ಗೈದು ಆ ಬಳಿಕ ಎರಡು ವರ್ಷ ಹೆಚ್ಚಿನ ವ್ಯಾಸಾಂಗಕ್ಕಾಗಿ ಕಲ್ಲಿಕೋಟೆಯ ಮರ್ಕಝ್ ತೆರಳಿ ಅಲ್ಲಿಂದ ಸಖಾಫಿ ಬಿರುದು ಪಡೆದು ಅಲ್ಲಿಂದ ನೇರವಾಗಿ ಸುಳ್ಯ ಗಾಂಧಿನಗರದ ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕಂಡರಿ ಮದ್ರಸದಲ್ಲಿ ವೃತ್ತಿ ಜೀವನ ಆರಂಭಿಸಿ ಸತತವಾಗಿ ಹದಿನೆಂಟು ವರ್ಷಗಳ ಅಧ್ಯಾಪನ ಸೇವೆಗೈದು ಸರ್ವರ ಪ್ರೀತಿ ಪಾತ್ರರಾಗಿದ್ದರು ಇದೀಗ ಎರಡು ವರ್ಷಗಳಿಂದ ಜಟ್ಟಿಪಳ್ಳದ ಬುಸ್ತಾನುಲ್ ಉಲೂಂ ಮದ್ರಸದಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆಯಲ್ಲಿದ್ದಾರೆ










