
ನೆಹರು ಮೆಮೋರಿಯಲ್ ಕಾಲೇಜು ಸುಳ್ಯ, ಸಮಾಜ ಕಾರ್ಯ ವಿಭಾಗ ಹಾಗೂ ಗ್ರಾಮ ಪಂಚಾಯತ್ ಐವರ್ನಾಡು, ಸಮಗ್ರ ಸಂಜೀವಿನಿ ಒಕ್ಕೂಟ ಇದರ ಆಶ್ರಯದಲ್ಲಿ ನಡೆದ ಕೌಶಲ್ಯ ತರಬೇತಿ ಶಿಬಿರವು ಉದ್ಘಾಟನೆಗೊಂಡಿತು.









ಅ. 9,10,11 ಮತ್ತು 16,17, 18ರವರೆ ನಡೆಯುವ ಕಾರ್ಯಕ್ರಮದ ತರಬೇತಿಯ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.
ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೌಶಲ್ಯ ತರಬೇತಿಯಿಂದ ಏನೆಲ್ಲ ಪ್ರಯೋಜನೆ ಇದೆ ಮತ್ತು ಸ್ವಾವಲಂಬನೆಯಾಗಿ ನಾವೇ ನಮಗೆ ಬೇಕಾಗುವಂತಹ ಸೋಪ್ ಗಳನ್ನು ಈ ಕೌಶಲ್ಯ ತರಬೇತಿಯಿಂದ ಕಲಿತು ತಯಾರಿಸಬಹುದು ಎಂದು ಅಧ್ಯಕ್ಷರ ನೆಲೆಯಲ್ಲಿ ಮಾತನಾಡಿದರು.
ಡಾ. ರುದ್ರಕುಮಾರ್ ಎಂ ಎಂ ಪ್ರಾಂಶುಪಾಲರು ಎನ್.ಎಂ.ಸಿ ಸುಳ್ಯ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಈ ಕೌಶಲ್ಯ ತರಬೇತಿಯು ಈ ಗ್ರಾಮೀಣ ಜನರಿಗೆ ತುಂಬಾ ಉಪಯುಕ್ತವಾದಂತಹ ಕಾರ್ಯಕ್ರಮ ಇದರಿಂದ ಇಂದು ಸಣ್ಣ ಪ್ರಮಾಣದಲ್ಲಿ ತಯಾರಿಸಿ ಮುಂದೊಂದು ದಿನ ಉದ್ದಿಮೆಯನ್ನು ಮಾಡಲಾಗದೆ ಎಂದು ಅಲ್ಲಿ ನೆರೆದಿದ್ದ ತರೆಬೆತುದಾರರ ಮನ ಮುಟ್ಟುವಂತೆ ಹೇಳಿದರು ಅವರನ್ನು ಇನ್ನು ಹೆಚ್ಚಿನ ಆಸಕ್ತಿ ಮೂಡುವಂತೆ ಮಾಡಿದರು
ಶ್ಯಾಮಪ್ರಸಾದ್ ಎಂ. ಆರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ್ ಐವರ್ನಾಡು, ಎಸ್ ಎನ್ ಮನ್ಮಥ ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಐವರ್ನಾಡು,
ಶ್ರೀಮತಿ ಶೋಭಾ. ಎ, ಮುಖ್ಯಸ್ಥರು ಸಮಾಜಕಾರ್ಯ ವಿಭಾಗ ಎನ್ ಎಮ್ ಸಿ ಸುಳ್ಯ ಹಾಗೂ ಶ್ರೀಮತಿ ಶ್ವೇತಾ NRLM ಕಾರ್ಯಕ್ರಮ ವ್ಯವಸ್ಥಾಪಕರು ತಾಲ್ಲೂಕು ಪಂಚಾಯತ್ ಸುಳ್ಯ ಮತ್ತು,ಡಾ.ಉಮೇಶ್ ಗ್ರಂಥ ಪಾಲಕರು ಎನ್ ಎಮ್ ಸಿ ಸುಳ್ಯ, ಸುಜಾತ ಪವಿತ್ರ ಮಜಲು ಸದಸ್ಯರು ಗ್ರಾಮ ಪಂಚಾಯತ್ ಐವರ್ನಾಡು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಸೋಪ್ ತಯಾರಿಕೆ ಬಗ್ಗೆ ಮಾಹಿತಿ ನೀಡಲು ಸಂಪನ್ಮೂಲ ವ್ಯಕ್ತಿಯಾಗಿ ಆಶಾ ಕೊಳಂಗಾಯ ಅಧ್ಯಕ್ಷರು ಸಂಜೀವಿನಿ ಒಕ್ಕೂಟ ಪೆರಾಜೆ ಇವರು ನಮ್ಮೊಂದಿಗಿದ್ದು ಸೋಪ್ ತಯಾರಿಸುವುದು ಅವುಗಳ ವಿಧಗಳು ಅವುಗಳಿಗೆ ಬಳಸುವಂತ ವಸ್ತುಗಳು ಎಷ್ಟರ ಪ್ರಮಾಣದಲ್ಲಿ ಬಳಸಬೇಕು ಹಾಗೂ ಸುಲಭವಾಗಿ ಯಾವ ರೀತಿ ಮನೆಯಲ್ಲೇ ಸೋಪ್ ತಯಾರಿಸಬಹುದು ಎಂಬುವುದನ್ನು ತರೆಬೆತುದಾರರಿಗೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಶ್ರೀಮತಿ ಸಾವಿತ್ರಿ ದೊಡ್ಡ ಮನೆ ಉಪಸ್ಥಿತರಿದ್ದರು. ತರಬೇತಿ ಪಡೆಯಲು ಗ್ರಾಮಪಂಚಾಯತ್ ಸದಸ್ಯರು, ಸಂಜೀವಿನಿ ಸಂಘದ ಸದಸ್ಯರು, ಪದಾಧಿಕಾರಿಗಳು, ಸಿಬ್ಬಂದಿಗಳು ಭಾಗಹಿಸಿದ್ದರು.
ಕಾರ್ಯಕ್ರಮದ ಪ್ರತಿಯೊಂದು ಜವಾಬ್ದಾರಿಯನ್ನು ಎನ್ ಎಮ್ ಸಿ ವಿದ್ಯಾರ್ಥಿಗಳು ಅಚ್ಚು ಕಟ್ಟಾಗಿ ನೆರವೇರಿಸಿ ಕೊಟ್ಟರು. ಜಸ್ವಂತ್. ಎ. ಡಿ ಎಲ್ಲರನ್ನೂ ಸ್ವಾಗತಿಸಿದರು ಸಂಜೀವಿನಿಯ ಎಂ ಬಿ ಕೆ ಅಮಿತಾ ಲಾವಂತಡ್ಕ ಎ
ವಂದಿಸಿದರು ಸಾತ್ವಿಕ್ ಪಿ ವಿ ಕಾರ್ಯಕ್ರಮವನ್ನು ನಿರೂಪಿಸಿದರು.










