ಡ್ಯಾನ್ಸ್ & ಬೀಟ್ಸ್ ನೃತ್ಯ ಸಂಸ್ಥೆ ಬೆಳ್ಳಾರೆ ಇದರ ನೇತೃತ್ವದಲ್ಲಿ ಸುಮಾರು 13 ವಿದ್ಯಾರ್ಥಿಗಳ ತಂಡ, ಯುವ ರಾಜ್ಯ ಪ್ರಶಸ್ತಿ ವಿಜೇತ ರಂಗ ನಿರ್ದೇಶಕರಾದ ವಿದ್ಧು ಉಚ್ಚಿಲ ರವರ ಮಾರ್ಗದರ್ಶನದಲ್ಲಿ ಕಳೆದ ಜೂನ್ ತಿಂಗಳಿನಿಂದ ರಂಗ ನಾಟಕ ತರಬೇತಿ ಪಡೆದು, ಇದೀಗ “ಗೊಂಬೆರಾವಣ “ಎಂಬ ಮಕ್ಕಳ ರಂಗ ನಾಟಕ ಸಿದ್ಧವಾಗಿದ್ದು, ಅಕ್ಟೋಬರ್ 18 ಶನಿವಾರ ಪೆರುವಾಜೆಯ ಜೆ.ಡಿ ಆಡಿಟೋರಿಯಂನಲ್ಲಿ ಮೊದಲ ಪ್ರದರ್ಶನ ಕಾಣಲಿದೆ.









ಸಂಜೆ 6.30 ರಿಂದ ಸಭಾ ಕಾರ್ಯಕ್ರಮ ನಡೆದು – ನಂತರ ಅತ್ಯುತ್ತಮ ನಿರ್ದೇಶನ, ಸುಮಧುರ ಸಂಗೀತ, ಅದ್ಭುತ ವೇಷಭೂಷಣ, ಆಕರ್ಷಕ ಪರಿಕರ, ಮಕ್ಕಳ ನೈಜ ಅಭಿನಯಗಳೊಂದಿಗೆ, ಮೊದಲ ಪ್ರದರ್ಶನಕ್ಕೆ ಸಜ್ಜಾಗಿದೆ. ರಂಗ ನಾಟಕದಲ್ಲಿ ಇರುವ 13 ಮಕ್ಕಳು ವಿವಿಧ 7 ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಾಗಿದ್ದಾರೆ.
ವಿದ್ಯಾರ್ಥಿಗಳನ್ನು ತಮ್ಮ ಶಾಲಾ ಶಿಕ್ಷಣದೊಂದಿಗೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪೂರ್ಣಪ್ರಮಾಣದ ಅಭಿನಯ ತರಬೇತಿಗಳನ್ನು ನೀಡಿ, ಮಕ್ಕಳು ಮುಂದೆ ತಮ್ಮ ಜೀವನದಲ್ಲಿ ಸರ್ವಾಂಗೀಣ ಪ್ರತಿಭೆಗಳಾಗಿ ಹೊರ-ಹೊಮ್ಮಿ, ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡು, ಮಕ್ಕಳು ಈ ದೇಶದ ಉತ್ತಮ ಪ್ರಜೆಗಳಾಗಿ ಮೂಡಿಬರಬೇಕು ಮತ್ತು ನೇತೃತ್ವ ವಹಿಸಿರುವ ತಂಡವಾದ ಡ್ಯಾನ್ಸ್ & ಬೀಟ್ಸ್ ನೃತ್ಯ ಸಂಸ್ಥೆ ವಿವಿಧ ಸಾಂಸ್ಕೃತಿಕ ಪ್ರಕಾರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕೆಂಬ ಆಶಯದೊಂದಿಗೆ ಸರ್ವ ಪೋಷಕರ ಸಹಕಾರದೊಂದಿಗೆ “ಮುದ್ರಾರಂಗ” ಚಿಣ್ಣರ ನಿರಂತರ ಯಾನ ಎಂಬ ಹೆಸರಿನೊಂದಿಗೆ ಕಲಾಭಿಮಾನಿಗಳ ಮುಂದೆ ಬರುತ್ತಿದ್ದು, ಎಲ್ಲರ ಸಹಕಾರದ ನೀರಿಕ್ಷೆಯೊಂದಿಗೆ, ತಂಡವು ಕಲಾಜಗತ್ತಿಗೆ ಪುಟ್ಟ ಹೆಜ್ಜೆಯನ್ನು ಇಡುತ್ತಿದೆ. ನಾಟಕ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಸಂಘಟಕರು ಆಶಯವನ್ನು ವ್ಯಕ್ತಪಡಿಸಿದ್ದಾರೆ.










