ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ವತಿಯಿಂದ ಅರಂತೋಡು ಬದ್ರಿಯಾ ಜುಮಾ ಮಸೀದಿಗೆ ಎರಡು ಸೀಲಿಂಗ್ ಫ್ಯಾನ್ ಗಳನ್ನು ಕೊಡುಗೆಯಾಗಿ ನೀಡಿದರು. ಇದನ್ನು ಒ.19 ರಂದು ನಡೆದ ಸಂಸ್ಥೆಯ ಮಾಸಿಕ ಸಭೆಯಲ್ಲಿ ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿಯವರಿಗೆ ಅನ್ವಾರುಲ್ ಹುಧಾ ಎಸೋಸಿಯೇಶನ್ ಉಪಾಧ್ಯಕ್ಷ ಮನ್ಸೂರ್ ಪಾರೆಕ್ಕಲ್, ಕಾರ್ಯದರ್ಶಿ ಪಸೀಲು ಹಸ್ತಾಂತರಿಸಿದರು.















ಈ ಸಂದರ್ಭದಲ್ಲಿ ಜಮಾಅತ್ ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ಕಾರ್ಯದರ್ಶಿ ಕೆ.ಎಮ್ ಮೂಸಾನ್, ಕೋಶಾಧಿಕಾರಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಅಮೀರ್ ಕುಕ್ಕುಂಬಳ, ಎ.ಹನೀಫ್ , ಮುಜೀಬ್, ಜುಬೈರ್ ಎಸ್.ಇ, ಸಂಶುದ್ಧೀನ್ ಕ್ಯೂರ್ ಮೊದಲಾದವರು ಉಪಸ್ಥಿತರಿದ್ದರು.










