
ಮಂಗಳೂರಿನಲ್ಲಿ ಪ್ರಧಾನ ಕಛೇರಿ ಹೊಂದಿದ್ದು ದಕ್ಷಿಣ ಕನ್ನಡ, ಮೈಸೂರು,ಕೊಡಗು ಜಿಲ್ಲೆಗಳಲ್ಲಿ ಎಂಟು ಶಾಖೆಗಳನ್ನು ಹೊಂದಿರುವ ಪ್ರಣವ ಸೌಹಾರ್ದ ಸಹಕಾರಿ ಸಂಘ (ನಿ.) ಸುಳ್ಯ ಶಾಖೆಯಲ್ಲಿ ಧನಲಕ್ಷ್ಮೀ ಪೂಜೆಯು ಅ. 20 ರಂದು ಬೆಳಿಗ್ಗೆ ಪುರೋಹಿತರಾದ ಗಣೇಶ್ ಭಟ್ ಇವರ ನೇತೃತ್ವದಲ್ಲಿ ನಡೆಯಿತು.








ಈ ಸಂದರ್ಭದಲ್ಲಿ ಸಹಕಾರಿ ಸಂಘದ ನಿರ್ದೇಶಕರಾದ ಸೋಮಪ್ಪ ನಾಯ್ಕ್, ದಯಾಸಾಗರ್ ಪೂಂಜಾ, ಶಾಖಾ ಕಾನೂನು ಸಲಹೆಗಾರರಾದ ಪಿ.ಭಾಸ್ಕರ್ ರಾವ್, ಚಂದ್ರಶೇಖರ ನಡುಮನೆ, ಶಾಖಾ ವ್ಯವಸ್ಥಾಪಕರಾದ ರಂಜಿತ್ ಅಡ್ತಲೆ, ಸಿಬ್ಬಂದಿಗಳಾದ ಶ್ರೀಮತಿ ವಿನುತಾ.ಡಿ , ಕು.ಸಂಗೀತಾ ಕೆ.ಎ, ಪಿಗ್ಮಿ ಸಂಗ್ರಾಹಕರಾದ ಯತಿನ್ ಕೆ. , ನವರಾಜ ಕೆ.ಜೆ ಉಪಸ್ಥಿತರಿದ್ದರು.










