ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಹೋಟೆಲ್ ಫುಡ್ ಪಾಯಿಂಟ್ ಶುಭಾರಂಭ

0

ವ್ಯಾಪಾರದಲ್ಲಿ ಗ್ರಾಹಕರ ಸಂತೃಪ್ತಿ ಮತ್ತು ಸ್ವಚ್ಛತೆಗೆ ಆದ್ಯತೆ ಇರಲಿ : ಟಿಎಂ ಶಹೀದ್ ತೆಕ್ಕಿಲ್

ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಅಬ್ದುಲ್ ಕರೀಂ ಪೈಚಾರ್ ಮಾಲಕತ್ವದ ಹೋಟೆಲ್ ಫುಡ್ ಪಾಯಿಂಟ್ ಅ. 20 ರಂದು ಶುಭಾರಂಭ ಗೊಂಡಿತು.

ನೂತನ ಸಂಸ್ಥೆಯನ್ನು ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಬೆಂಗಳೂರು ಇದರ ಅಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕೆಲ್ ರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಗೆ ಶುಭ ಹಾರೈಸಿ ಮಾತನಾಡಿದ ಅವರು ಸಂಸ್ಥೆಯಲ್ಲಿ ಗ್ರಾಹಕರ ಸಂತೃಪ್ತಿ ಹಾಗೂ ಸ್ವಚ್ಛತೆಗೆ ಆದ್ಯತೆಯನ್ನು ನೀಡ ಬೇಕು ಎಂದರು. ಗ್ರಾಹಕರಿಗೆ ಖಾದ್ಯಗಳನ್ನು ನೀಡುವಾಗ ಪ್ರಮುಖವಾಗಿ ಸ್ವಚ್ಛತೆ ಬಹಳ ಮುಖ್ಯವಾಗಿದ್ದು ಅದನ್ನು ಪಾಲಿಸುವಂತೆ ಸಲಹೆ ನೀಡಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರಂತುಡು ಜುಮಾ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷ ಅಶ್ರಫ್ ಗುಂಡಿ ರವರು ವಹಿಸಿದ್ದರು.
ಈ ಸಂದರ್ಭದಲ್ಲಿ ಹಿರಿಯರಾದ ಅಬೂಬಕ್ಕರ್, ಹೋಟೆಲ್ ಮಾಲಕರಾದ ಅಬ್ದುಲ್ ಕರೀಂ, ಪೈಚಾರ್ ಅಲ್ ಅಮಿನ್ ಯೂತ್ ಸೆಂಟರ್ ಅಧ್ಯಕ್ಷ ಸತ್ತಾರ್ ಪೈಚಾರ್, ಉಪಾಧ್ಯಕ್ಷ ಹನೀಫ್ ಅಲ್ಫ, ಪೈಚಾರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಇಬ್ರಾಹಿಂ, ಮುಳುಗು ತಜ್ಞ ಅಬ್ಬಾಸ್ ಪೈಚಾರ್, ಝುಬೈರ್ ಅರಂತೋಡು, ಮೊದಲಾದವರು ಉಪಸ್ಥಿತರಿದ್ದರು.

ಸುಳ್ಯದ ಪೈಚಾರಿ ನಲ್ಲಿ ಕಳೆದ ಹತ್ತು ವರ್ಷಗಳಿಂದ ಫುಡ್ ಪಾಯಿಂಟ್ ಹೋಟೆಲ್ ಅನ್ನು ಯಶಸ್ವಿಯಾಗಿ ನಡೆಸುತ್ತಾ ಬರುತ್ತಿದ್ದು ಬೇಗ ಅನಂತೋಡಿನಲ್ಲಿ ನೂತನ ಶಾಖೆಯನ್ನು ನಾವು ಆರಂಭಿಸಿದ್ದೇವೆ.ನೂತನವಾಗಿ ಆರಂಭಗೊಂಡ ಈ ಹೋಟೆಲ್ನಲ್ಲಿ ಶ್ವಾಧಬರಿತ ಸಸ್ಯಹಾರಿ ಹಾಗೂ ಮಾಂಸಾಹಾರಿ ಖಾದ್ಯಗಳು, ಊಟ ಪಲಹಾರಗಳು ಲಭ್ಯವಿರುತ್ತದೆ ಎಂದು ಮಾಲಕರು ತಿಳಿಸಿದರು.


ಸುದ್ದಿ ವರದಿಗಾರ ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಈ ಸಂದರ್ಭದಲ್ಲಿ ಸಂಸ್ಥೆಯಿಂದ ಟಿ ಎಂ ಶಹೀದ್ ತೆಕ್ಕಿಲ್ ರವರಿಗೆ ಗೌರವ ಸನ್ಮಾನ ನಡೆಯಿತು.