ಸುಳ್ಯದ ಶ್ರೀ ರಾಂ ಪೇಟೆಯ ಕುರುಂಜಿಕಾರ್ಸ್ ಹೆಲ್ತ್ ಕಾಂಪ್ಲೆಕ್ಸ್ ನಲ್ಲಿರುವ ಸಿಂಧೂರ ಜ್ಯುವೆಲ್ಲರ್ಸ್ ನಲ್ಲಿ ಶ್ರೀ ಧನಲಕ್ಷ್ಮೀ ಪೂಜೆ ಮತ್ತು ದ.ಕ.ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ದೇವಚಳ್ಳ ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಶ್ರೀಧರ ಗೌಡ ಕೆರೆಮೂಲೆಯವರಿಗೆ ಗೌರವಾರ್ಪಣೆ ಕಾರ್ಯಕ್ರಮ ಇಂದು ನಡೆಯಿತು.









ಶ್ರೀಧರ ಗೌಡರನ್ನು ಶಾಲು, ಹಾರ, ಸ್ಮರಣಿಕೆ ನೀಡಿ ಸಂಸ್ಥೆಯ ಮಾಲಕರಾದ ವಸಂತ ಕೆ.ಮತ್ತು ಶ್ರೀಮತಿ ಆಶಾ ದಂಪತಿಗಳು ಗೌರವಿಸಿದರು. ಈ ಸಂದರ್ಭದಲ್ಲಿ ನಾಗೇಶ್ ಕೆ. ಮತ್ತು ಮನೆಯವರು ಹಾಗೂ ಸಂಸ್ಥೆಯ ಸಿಬ್ಬಂದಿಗಳು, ಹಿತೈಷಿಗಳು ಉಪಸ್ಥಿತರಿದ್ದರು.










