ಪೈಲಾರು ಶೌರ್ಯ ಯುವತಿ ಮಂಡಲದಿಂದ ಸ್ವಚ್ಚತಾ ಅಭಿಯಾನ

0

ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ, ಶೌರ್ಯ ಯುವತಿ ಮಂಡಲ ರಿ. ಪೈಲಾರು ನೇತೃತ್ವದಲ್ಲಿ ಪಂಚಸಪ್ತಮಿ 2025, 75 ದಿನಗಳ ಸ್ವಚ್ಛತಾ ಅಭಿಯಾನದ ಪ್ರಯುಕ್ತ ಪೈಲಾರಿನ ಬಸ್ ನಿಲ್ದಾಣ ಮತ್ತು ಸುತ್ತಲಿನ ಪರಿಸರವನ್ನು ಈ ದಿನ ಸ್ವಚ್ಛ ಮಾಡಲಾಯಿತು. ಈ ಸಂದರ್ಭದಲ್ಲಿ ಶೌರ್ಯ ಯುವತಿ ಮಂಡಲದ ಅಧ್ಯಕ್ಷೆ ಭವ್ಯ ನಾಯರ್ ಕಲ್ಲು ಕಾರ್ಯದರ್ಶಿ ಸೌಂದರ್ಯ ಕಡಪಳ ಉಪಾಧ್ಯಕ್ಷೆ ಲೋಕೇಶ್ವರಿ ನಿರ್ದೇಶಕರಾದ ರಾಜೀವಿ ಗೋಳ್ಯಾಡಿ, ಕಮಲಾಕ್ಷಿ ಗುಡ್ಡೆಮನೆ, ಶ್ವೇತ ನಾಯರ್ ಕಲ್ಲು, ಲಲಿತಾ ಲಕ್ಷ್ಮಿ, ಚರಿಷ್ಮ ಕಡಪಳ, ಶ್ರೀಲತಾ ಕುಸುಮಾವತಿ ಕೋಡ್ತುಗುಳಿ ಉಪಸ್ಥಿತರಿದ್ದರು.