ಡಾ.ಕೆ.ವಿ.ರೇಣುಕಾಪ್ರಸಾದರಿಂದ ಕುಂಭಾಶಿ ಭೇಟಿ

0

ಕುಕ್ಕೆ ದೇವಳಕ್ಕೆ ಅರ್ಪಿಸಲಿರುವ ಬೆಳ್ಳಿರಥ ನಿರ್ಮಾಣ ಕಾರ್ಯ ವೀಕ್ಷಣೆ

ರಥ ಸಮರ್ಪಣಾ ಕಾರ್ಯಕ್ರಮಕ್ಕೆ ಬರಲು ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ರಥಶಿಲ್ಪಿ ಲಕ್ಷ್ಮೀನಾರಾಯಣಾಚಾರ್ಯರಿಗೆ ಆಹ್ವಾನ

ತಾನು ಮತ್ತು ತನ್ನ ಮನೆಯವರು ಸಂಕಲ್ಪಿಸಿದಂತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ತಾನಕ್ಕೆ ಸಮರ್ಪಿಸಲಿರುವ ಬೆಳ್ಳಿರಥ ನಿರ್ಮಾಣ ಕಾರ್ಯ ವೀಕ್ಷಿಸಲು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಬಿ ತಂಡದ ಅಧ್ಯಕ್ಷ ಡಾ.ಕೆ.ವಿ.ರೇಣುಕಾಪ್ರಸಾದರು ನಿನ್ನೆ ರಥಶಿಲ್ಪಿ ಕುಂದಾಪುರದ ಕುಂಭಾಶಿಯಲ್ಲಿರುವ ವಿಶ್ವಕರ್ಮಕಲಾಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಣೆಗೈದರು.
ಕೆ.ವಿ.ಜಿ. ಐ.ಟಿ.ಐ. ಪ್ರಾಂಶುಪಾಲ ದಿನೇಶ್ ಮಡ್ತಿಲ ಹಾಗೂ ಕೆ.ವಿ.ಜಿ. ಪವರ್ ಹೌಸ್ ನ ವಸಂತ ಕಿರಿಭಾಗರವರು ಮತ್ತು ಸುಳ್ಯದ ಪತ್ರಕರ್ತರು ಡಾ.ರೇಣುಕಾಪ್ರಸಾದರ ಜತೆಗಿದ್ದರು.
ರಥನಿರಗಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ರಾಜಗೋಪಾಲಾಚಾರ್ಯರು ಅವರನ್ನು ಸ್ವಾಗತಿಸಿದರಲ್ಲದೆ, ರಥ ನಿರ್ಮಾಣದ ಸಂಪೂರ್ಣ ವಿವರ ನೀಡಿದರು.
ಬಳಿಕ ರೇಣುಕಾಪ್ರಸಾದರು ನ.3 ರಿಂದ 10 ರ ವರೆಗೆ ನಡರಯುವ ಬೆಳ್ಳಿರಥದ ಯಾತ್ರೆ ಮತ್ತು ರಥ ಸಮರ್ಪಣಾ ಕಾರ್ಯಕ್ರಮದ ಆಹ್ವಾನ ಪತ್ರವನ್ನು ರಥಶಿಲ್ಪಿಗಳಿಗೆ ನೀಡಿ‌ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು.