ಡಾ.ಕೆ.ವಿ.ರೇಣುಕಾಪ್ರಸಾದರಿಂದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಬೆಳ್ಳಿರಥ ಯಾತ್ರೆಗೆ ಆಹ್ವಾನ

0

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಬಿ ತಂಡದ ಅಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ.ಯವರು ನಿನ್ನೆ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಉಡುಪಿಯಲ್ಲಿ ಭೇಟಿಯಾಗಿ ಬೆಳ್ಳಿರಥ ಯಾತ್ರೆಗೆ ಆಗಮಿಸುವಂತೆ ಆಹ್ವಾನ ಪತ್ರ ನೀಡಿ ಆಹ್ವಾನಿಸಿದರು.
ಡಾ.ರೇಣುಕಾಪ್ರಸಾದರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಮರ್ಪಿಸಲಿರುವ ಬೆಳ್ಳಿರಥ ಕುಂದಾಪುರದ ಕುಂಭಾಶಿಯಲ್ಲಿ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಹಾಗೂ ರಾಜಗೋಪಾಲಾಚಾರ್ಯರ ನೇತೃತ್ವದಲ್ಲಿ ನಿರ್ಮಾಣಗೊಳ್ಳುತ್ತಿದ್ದು ಅಂತಿಮ ಹಂತ ತಲುಪಿದೆ. ಅದರ ವೀಕ್ಷಣೆಗೆ ಹೋಗಿದ್ದ ಡಾ.ರೇಣುಕಾಪ್ರಸಾದರು ಉಡುಪಿಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಕಂಡು ರಥಯಾತ್ರೆಗೆ ಆಹ್ವಾನಿಸಿದರು. ನವೆಂಬರ್ 4 ರಂದು ಬೆಳಿಗ್ಗೆ 8 ಗಂಟೆಗೆ ಬೆಳ್ಳಿರಥವು ಕುಂದಾಪುರದ ಕೋಟೇಶ್ವರ ದೇವಸ್ಥಾನದಿಂದ ಹೊರಡಲಿದ್ದು , ಆ ವೇಳೆಗೆ ಸಂಸದರು ಅಲ್ಲಿಗೆ ಬರಲಿದ್ದಾರೆಂದೂ, ನವೆಂಬರ್ 10 ರಂದು ಬೆಳಿಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ರಥ ಸಮರ್ಪಣೆಯ ಕಾರ್ಯಕ್ರಮದಲ್ಲಿ ಕೂಡ ಅವರು ಭಾಗವಹಿಸಲಿದ್ದಾರೆಂದೂ ತಿಳಿದುಬಂದಿದೆ.
ಡಾ.ರೇಣುಕಾಪ್ರಸಾದರ ಜತೆಗೆ ಕೆ.ವಿ.ಜಿ. ಐ.ಟಿ.ಐ. ಪ್ರಿನ್ಸಿಪಾಲ್ ದಿನೇಶ್ ಮಡ್ತಿಲ, ವಸಂತ ಕಿರಿಭಾಗ, ಹೇಮಾನಂದ ಹಲ್ದಡ್ಕ ಮತ್ತಿತರರಿದ್ದರು.‌