ಬೆಳ್ಳಿರಥದ ಸ್ವಾಗತಕ್ಕೆ ದುಗ್ಗಲಡ್ಕದಲ್ಲಿ ಪೂರ್ವಭಾವಿ ಸಭೆ

ಪ್ರಸಿದ್ಧ ಪುಣ್ಯಕ್ಷೇತ್ರವಾದ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಅಮರಶಿಲ್ಪಿ ಡಾ.ಕುರುಂಜಿ ವೆಂಕಟ್ರಮಣ ಗೌಡರವರ ಪುತ್ರ ಡಾ.ರೇಣುಕಾ ಪ್ರಸಾದ್ ಕೆ.ವಿ.ಮತ್ತು ಮನೆಯವರು ಬೆಳ್ಳಿರಥ ಸಮರ್ಪಣೆ ಮಾಡಲಾದ್ದು, ರಥವು ಸಾಗಿಬರುವ ರಸ್ತೆಯ ದುಗ್ಗಲಡ್ಕ ಪೇಟೆಯಲ್ಲಿ ಅದ್ದೂರಿ ಸ್ವಾಗತ ಮಾಡುವ ಬಗ್ಗೆ ಪೂರ್ವಭಾವಿ ಸಭೆ ಇಂದು ದುಗ್ಗಲಡ್ಕದ ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.









ರಥವು ನ.5ರಂದು ಸುಳ್ಯದಿಂದ ಹೊರಟು ಸೋಣಂಗೇರಿ, ದುಗ್ಗಲಡ್ಕ, ಗುತ್ತಿಗಾರು ಮೂಲಕ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಲುಪಲಿದೆ.

ಪೂರ್ವಭಾವಿ ಸಭೆಗೆ ಆಗಮಿಸಿದ ರಥ ಸಮರ್ಪಣಾ ಸಮಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡಿರುವ ನ್ಯಾಯವಾದಿ ದಿನೇಶ್ ಮಡಪ್ಪಾಡಿ, ಎಒಎಲ್ಇ ಕಮಿಟಿ ಬಿ ಇದರ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ಕೆವಿಜಿ ಐಟಿಐ ಪ್ರಾಂಶುಪಾಲರಾದ ದಿನೇಶ್ ಮಡ್ತಿಲ, ಕುಕ್ಕೆ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮೋಹನರಾಮ್ ಸುಳ್ಳಿ ಯವರು ರಥ ನಿರ್ಮಾಣವಾದ ಕೋಟೇಶ್ವರದಿಂದ ಹೊರಡುವಲ್ಲಿಂದ ಸುಬ್ರಹ್ಮಣ್ಯದಲ್ಲಿ ಸಮರ್ಪಣೆಗೊಳ್ಳುವವರೆಗಿನ ಮಾಹಿತಿಯನ್ನು ನೀಡಿದರು. ರಥ ಸಂಚರಿಸುವ ರಸ್ತೆಯ ಅಲ್ಲಲ್ಲಿ ರಥವನ್ನು ಭಕ್ತಿಪೂರ್ವಕವಾಗಿ ಬರಮಾಡಿಕೊಂಡು ಸ್ವಾಗತ ಕೋರಿ ಈ ಪುಣ್ಯಪ್ರದವಾದ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ವಿನಂತಿಸಿದರು. ವೇದಿಕೆಯಲ್ಲಿ ಸಹಕಾರಿ ಧುರೀಣ ಚಂದ್ರ ಕೋಲ್ಚಾರ್, ವೆಂಕಟ್ರಮಣ ಸೊಸೈಟಿ ನಿರ್ದೇಶಕ ಪಿ.ಎಸ್.ಗಂಗಾಧರ್, ದುಗ್ಗಲಡ್ಕ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು, ದುಗ್ಗಲಾಯ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಕಜೆ, ಕೆವಿಜಿ ಸುಳ್ಯ ಸಮಿತಿ ಅಧ್ಯಕ್ಷ ಕೆ.ಟಿ.ವಿಶ್ವನಾಥ ಉಪಸ್ಥಿತರಿದ್ದರು.

ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಕುರಲ್ ತುಳುಕೂಟದ ಅಧ್ಯಕ್ಷ ರಮೇಶ್ ನೀರಬಿದಿರೆ ಸ್ವಾಗತಿಸಿ, ಕೆ.ಟಿ.ವಿಶ್ವನಾಥ ವಂದಿಸಿದರು.










