ಸೋಣಂಗೇರಿಯಲ್ಲಿ ಊರವರ ಸಭೆ









ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಎಒಎಲ್ಇ ಕಮಿಟಿ ಬಿ ಅಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆವಿಯವರಿಂದ ಬೆಳ್ಳಿರಥ ಸಮರ್ಪಣಾ ಕಾರ್ಯಕ್ರಮ ನ. 10ರಂದು ನಡೆಯಲಿದೆ. ಇದಕ್ಕೆ ಪೂರಕವಾಗಿ ನ. 3,4,5 ಹಾಗೂ 9 ರಂದು ನಡೆಯಲಿರುವ ವಿವಿಧ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಸಭೆ ನಡೆಯಲಿದ್ದು, ನ. 28ರಂದು ಬೆಳಿಗ್ಗೆ 10.30ಕ್ಕೆ ಸೋಣಂಗೇರಿಯ ಶ್ರೀಕೃಷ್ಣ ಭಜನಾ ಮಂಡಳಿಯಲ್ಲಿ ಊರವರ ಸಭೆ ನಡೆಯಿತು. ನ. 5ರಂದು ಸೋಣಂಗೇರಿಯಲ್ಲಿ ಬೆಳ್ಳಿರಥವನ್ನು ಸ್ವಾಗತಿಸುವ ಬಗ್ಗೆ ಚರ್ಚಿಸಲಾಯಿತು. ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡಿರುವ ನ್ಯಾಯವಾದಿ ದಿನೇಶ್ ಮಡಪ್ಪಾಡಿ, ಎಒಎಲ್ಇ ಕಮಿಟಿ ಬಿ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ ಮತ್ತು ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ದಿನೇಶ್ ಮಡ್ತಿಲ ಮಾಹಿತಿ ನೀಡಿದರು. ವಿವಿಧ ಸಮಿತಿಗಳ ಸದಸ್ಯರಾದ ಎಸ್.ಎನ್. ಮನ್ಮಥ, ಚಂದ್ರಾ ಕೋಲ್ಚಾರ್, ಪದ್ಮನಾಭ ಬೀಡು, ಬಾಲಕೃಷ್ಣ ಕೀಲಾಡಿ ಸೇರಿದಂತೆ ಅನೇಕ ಮಂದಿ ಸಭೆಯಲ್ಲಿ ಉಪಸ್ಥಿತರಿದ್ದು, ಅಭಿಪ್ರಾಯ ವ್ಯಕ್ತಪಡಿಸಿದರು. ಭಜನಾ ಮಂದಿರದ ಅಧ್ಯಕ್ಷ ಗಿರಿಧರ ಗೌಡ ಸ್ವಾಗತಿಸಿ, ಕೆವಿಜಿ ಸಿಬ್ಬಂದಿ ಜಯಂತ್ ತಳೂರು ವಂದಿಸಿದರು.

ಭಜನಾ ಮಂದಿರದ ಕಾರ್ಯದರ್ಶಿ ನಿರಂಜನ ಮಿತ್ತಮಜಲು, ಕೋಶಾಧಿಕಾರಿ ಶ್ರೀಮತಿ ಲೀಲಾವತಿ ನಡುಮನೆ, ಉಪಾಧ್ಯಕ್ಷೆ ಹರಿಣಾಕ್ಷಿ ಸೋಣಂಗೇರಿ, ಸದಸ್ಯರಾದ ಶುಭ ಕಾಡುತೋಟ, ಪುರುಷೋತ್ತಮ ಆಚಾರ್ಯ, ಊರವರಾದ ವಾಸುದೇವ, ಆಶಾ, ಚಿದಾನಂದ ಬಾಂಜಿಕೋಡಿ, ದೇವಿಪ್ರಸಾದ್ ಕುದ್ಪಾಜೆ, ಗೌರಿಶಂಕರ ಮೋಂಟಡ್ಕ, ಭಾಸ್ಕರ ಗೌಡ ಹೊಸಗದ್ದೆ, ಚೆನ್ನಪ್ಪ ಗೌಡ ಸೋಣಂಗೇರಿ, ಸೋಣಂಗೇರಿ ಸ.ಹಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಚಿದಾನಂದ ಸೋಣಂಗೇರಿ ಸೇರಿದಂತೆ ಅನೇಕ ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು.










