ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ಇದರ ೩೫ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವು ಕೆ.ವಿ.ಜಿ. ಕಮ್ಯುನಿಟಿ ಹಾಲ್‌ನಲ್ಲಿ ಅ.೨೮ ರಂದು ನಡೆಯಿತು.















ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಇದರ ಕಮಿಟಿ ಬಿ ಅಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ರಾಜೀವ್ ಗಾಂಧಿ ಯುನಿರ್ವಸಿಟಿ ಆಫ್ ಹೆಲ್ತ್ ಸೈನ್ಸ್‌ಸ್, ಬೆಂಗಳೂರು, ಇದರ ಗೌರವಾನ್ವಿತ ಸೆನೆಟ್ ಸದಸ್ಯೆ ಶ್ರೀಮತಿ ವೈಶಾಲಿ ಶ್ರೀಜಿತ್ ಇವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ, ವಿದ್ಯಾರ್ಥಿಗಳ ವೈದ್ಯಕೀಯ ಸೇವೆ ಪ್ರತಿ ಭಾಗದ ಜನರಿಗೆ ಸಿಗುವಂತಾಗಲಿ ಎಂದು ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಶುಭ ಹಾರೈಸಿದರು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಇದರ ಕಮಿಟಿ ಬಿ ಕಾರ್ಯದರ್ಶಿ ಡಾ. ಜ್ಯೋತಿ ಆರ್ ಪ್ರಸಾದ್, ಕಾಲೇಜಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮೌರ್ಯ ಆರ್. ಪ್ರಸಾದ್ ಮಾತನಾಡಿ, ನೀವೆಲ್ಲರೂ ನಿಷ್ಕಲ್ಮಶ ಮನಸ್ಸಿನಿಂದ ಶಿಕ್ಷಣ ಪಡೆಯುವುದರ ಜೊತೆಗೆ ಜನರ ಸೇವೆ ಮಾಡಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಪ್ರಾಂಶುಪಾಲ ಡಾ. ಮೋಕ್ಷ ನಾಯಕ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಡಾ. ಆಲ್ಳಿ ಜೋಸ್ ಪ್ರಾರ್ಥಿಸಿ, ಡಾ. ಜಯಪ್ರಸಾದ್ ಆನೆಕಾರ್ ವಂದಿಸಿದರು.
ಕಾರ್ಯಕ್ರವನ್ನು ಡಾ. ಆನ್ಸಿಲಾ ರಾಘೇಶ್ ಮತ್ತು ಡಾ. ಸೈದಾ ನೂರ್ ಜೋರಾ ನಿರೂಪಿಸಿದರು. ಈ ಕಾರ್ಯಕ್ರಮವನ್ನು ಮಾಧವ ಬಿ ಟಿ ರವರು ನಿರ್ವಹಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಭೋಧಕ ಭೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಹೆತ್ತವರು ಉಪಸ್ಥಿತರಿದ್ದರು. ಎಲ್ಲಾ ನೂತನ ವಿದ್ಯಾರ್ಥಿಗಳಿಗೆ ಹೂಗುಚ್ಚ ಹಾಗೂ ವೈದ್ಯಕೀಯ ಸಮವಸ್ತ್ರ ನೀಡಿ ಸ್ವಾಗತಿಸಲಾಯಿತು ಹಾಗೂ ಪ್ರತಿಜ್ಞಾವಿಧಿ ಬೋಧಿಸಲಾಯಿತು.










