ಬೆಳ್ಳಿರಥದ ಸ್ವಾಗತಕ್ಕೆ ದೇವಚಳ್ಳದಲ್ಲಿ ಪೂರ್ವಭಾವಿ ಸಭೆ
ಪ್ರಸಿದ್ಧ ಪುಣ್ಯಕ್ಷೇತ್ರವಾದ ಕುಕ್ಕೆಶ್ರೀ ಸುಬ್ರಹ್ಮಣ್ಯಕ್ಕೆ ಡಾ.ರೇಣುಕಾ ಪ್ರಸಾದ್ ಕೆ.ವಿ. ಮತ್ತು ಮನೆಯವರು ಬೆಳ್ಳಿರಥ ಸಮರ್ಪಣೆ ಮಾಡಲಿದ್ದು, ರಥವು ಸಾಗಿಬರುವ ರಸ್ತೆಯ ಮಾವೀನಕಟ್ಟೆಯಲ್ಲಿ ಅದ್ದೂರಿ ಸ್ವಾಗತ ಮಾಡುವ ಬಗ್ಗೆ ಪೂರ್ವಭಾವಿ ಸಭೆ ದೇವಚಳ್ಳ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.















ರಥವು ನ.5ರಂದು ಸುಳ್ಯದಿಂದ ಹೊರಟು ಸೋಣಂಗೇರಿ, ದುಗ್ಗಲಡ್ಕ, ದೊಡ್ಡತೋಟ, ಎಲಿಮಲೆ, ದೇವಚಳ್ಳ, ಗುತ್ತಿಗಾರು ಮೂಲಕ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಲುಪಲಿದೆ.
ಪೂರ್ವಭಾವಿ ಸಭೆಗೆ ಆಗಮಿಸಿದ ರಥ ಸಮರ್ಪಣಾ ಸಮಿತಿಯ ಪ್ರಮುಖರು, ನ್ಯಾಯವಾದಿ ದಿನೇಶ್ ಮಡಪ್ಪಾಾಡಿ, ಜ್ಯೋತಿ ಆರ್. ಪ್ರಸಾದ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಭವಾನಿಶಂಕರ ಅಡ್ತಲೆ, ಪಿ.ಎಸ್ ಗಂಗಾಧರ, ಶೈಲೇಶ್ ಅಂಬೆಕಲ್ಲು, ರಾಜೇಶ್ ಅಂಬೆಕಲ್ಲು, ದುರ್ಗಾದಾಸ್ ಮೆತ್ತಡ್ಕ, ವೆಂಕಟ್ ಮೆದು ಜಯಂತ ತಳೂರು ಮತ್ತಿತರರು ಉಪಸ್ಥಿತರಿದ್ದರು.










