ಮರ್ಕಂಜ : ಶತಾಯುಷಿ ಶಿವಮ್ಮ ಮಿತ್ತಡ್ಕ ನಿಧನ

0

ಮರ್ಕಂಜ ಗ್ರಾಮದ ಮಿತ್ತಡ್ಕ ದಿ. ಶೀನ ಪುರುಷ ಎಂಬವರ ಪತ್ನಿ ಶಾತಾಯುಷಿ ಶ್ರೀಮತಿ ಶಿವಮ್ಮ ಎಂಬವರು ಇಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 107 ವರ್ಷ ವಯಸ್ಸಾಗಿತ್ತು.
ಶಿವಮ್ಮರವರು ಮಿತ್ತಡ್ಕ ಅಂಗನವಾಡಿ ಆರಂಭವಾದಾಗ ಅಂಗನವಾಡಿ ಸಹಾಯಕಿಯಾಗಿ ಸುಮಾರು 12 ವರ್ಷ ಸೇವೆ ಸಲ್ಲಿಸಿದ್ದರು.
ಅಲ್ಲದೇ ಹೆರಿಗೆ ಮಾಡುವಲ್ಲಿಯೂ ಪ್ರವೀಣ್ಯತೆ ಪಡೆದಿದ್ದಾರಲ್ಲದೆ ಮರ್ಕಂಜ ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಹೆರಿಗೆ ಮಾಡುವ ಕರ್ತವ್ಯ ಮಾಡುತ್ತಿದ್ದರು. ಹಾಗೂ ವಿವಿಧ ಖಾಯಿಲೆಗಳಿಗೆ ಹಳ್ಳಿ ಮದ್ದು ನೀಡುತ್ತಿದ್ದರು.

ಮೃತರು ಪುತ್ರರಾದ ಉಪೇಂದ್ರನಾಥ ಪುರುಷ, ರಾಮಚಂದ್ರನಾಥ ಪುರುಷ, ಚಂದ್ರುನಾಥ ಪುರುಷ, ಪುತ್ರಿರಾದ ಶ್ರೀಮತಿ ಅನುಷ್ಯ ಸಂಜೀವ ಕೇಪು, ವಿಟ್ಲ, ಶ್ರೀಮತಿ ಪದ್ಮಾವತಿ ದಯಾನಂದ ಬಾಯಾರ್ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.