ಅಡ್ಪಂಗಾಯ ಸ. ಹಿ. ಪ್ರಾ. ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

0

ಅಡ್ಪಂಗಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ನ.1 ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಬ್ಬಾಸ್ ಎ. ಬಿ ರವರ ಅಧ್ಯಕ್ಷತೆಯಲ್ಲಿ
ಹಿರಿಯ ಶಿಕ್ಷಕಿ ಶ್ರೀಮತಿ ನರ್ಮದಾ ರಾಜ್ಯೋತ್ಸವದ ಮಹತ್ವ ವನ್ನು ವಿವರಿಸಿದರು.


ನಂತರ ಅಧ್ಯಕ್ಷರು, ಶಿಕ್ಷಕ ವೃಂದ, ಶಾಲಾ ನಾಯಕ ಮತ್ತು ಶಾಲಾ ಉಪನಾಯಕರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಹೂ ಹಾಕಿ ನಮನ ಸಲ್ಲಿಸಿದರು.

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಶಿಕ್ಷಕರಾದ ಶ್ರೀಮತಿ ಕಲಾವತಿ ಸ್ವಾಗತಿಸಿ ಶ್ರೀಮತಿ ನರ್ಮದಾ ವಂದಿಸಿದರು.

ಮಕ್ಕಳಿಗೆ ಸಿಹಿತಿಂಡಿ ಯನ್ನು ಅಧ್ಯಕ್ಷರು ನೀಡಿ ಸಹಕರಿಸಿದರು.